ಇಂಟಗ್ರೇಟೆಡ್ MBBS, BAMS ಕೋರ್ಸ್ ಅವಧಿ 5 ವರ್ಷಗಳಿಗೂ ಅಧಿಕ: RTI ವರದಿ

ಆರೋವಿಲ್ಲೆ ಫೌಂಡೇಶನ್ ಸಿದ್ಧಪಡಿಸಿರುವ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಅವರು ಮೇ 27 ರಂದು ಘೋಷಿಸಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪುದುಚೇರಿಯ ಜಿಪ್ಮರ್ ನಲ್ಲಿ ಕೇಂದ್ರದ ಪ್ರಸ್ತಾವಿತ ಹೊಸ ಇಂಟಿಗ್ರೇಟೆಡ್ ಎಂಬಿಬಿಎಸ್- ಬಿಎಎಂಎಸ್ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ ಮತ್ತು ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ) ಕೋರ್ಸ್ ಐದು ವರ್ಷಗಳಿಗಿಂತ ಹೆಚ್ಚು ಅವಧಿಯ ಪದವಿ ಕೋರ್ಸ್ ಆಗಿದ್ದು, ಒಂದು ವರ್ಷದ ಇಂಟರ್ನ್‌ಶಿಪ್ ಮಾಡಿ ಎರಡು ಪದವಿ ಗಳಿಸಿದಂತಾಗುತ್ತದೆ ಎಂದು ಆರ್ ಟಿಐನಲ್ಲಿ ಬಹಿರಂಗಗೊಂಡಿದೆ.

ಆರೋವಿಲ್ಲೆ ಫೌಂಡೇಶನ್ ಸಿದ್ಧಪಡಿಸಿರುವ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಅವರು ಮೇ 27 ರಂದು ಘೋಷಿಸಿದ್ದರು. ಈ ಪ್ರಸ್ತಾವನೆಯು, ಹಂತ 1 ರ ಪಠ್ಯಕ್ರಮವು ಸಿದ್ಧವಾಗಿದೆ. ವೈದ್ಯಕೀಯ ಶಿಕ್ಷಣ, ವೈದ್ಯಕೀಯ ವೃತ್ತಿಪರರು, ಸಂಸ್ಥೆಗಳು ಮತ್ತು ಸಂಶೋಧನೆಯನ್ನು ನಿಯಂತ್ರಿಸುವ ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಮಂಡಳಿ (NMC) ಪ್ರಸ್ತಾಪಿಸಿದ ಸಾಮರ್ಥ್ಯ ಆಧಾರಿತ ಪಠ್ಯಕ್ರಮ (CBME) ಮೇಲೆ ಸಿದ್ಧಪಡಿಸಲಾಗಿದೆ ಎಂದು ಹೇಳುತ್ತದೆ.

ಆದಾಗ್ಯೂ, ಹೊಸ ಕೋರ್ಸ್‌ಗಳು ಮತ್ತು ಪಠ್ಯಕ್ರಮಗಳನ್ನು ನಿರ್ಧರಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಭಾರತೀಯ ವೈದ್ಯಕೀಯ ವ್ಯವಸ್ಥೆಯ ರಾಷ್ಟ್ರೀಯ ಆಯೋಗ (NCISM) ಸೇರಿದಂತೆ ಪ್ರಮುಖ ನಿಯಂತ್ರಕ ಸಂಸ್ಥೆಗಳು RTI ದಾಖಲೆಗಳ ಪ್ರಕಾರ ಪ್ರಸ್ತಾವನೆಯಲ್ಲಿ ಭಾಗಿಯಾಗಿಲ್ಲ.

MBBS ಮತ್ತು BAMS ಕೋರ್ಸ್ ಗಳನ್ನು ಸಂಯೋಜಿಸುವ ಸಂಯೋಜಿತ ವೈದ್ಯಕೀಯ ಕೋರ್ಸ್‌ಗೆ ಕೇಂದ್ರದ ಒತ್ತಾಯದ ಬಗ್ಗೆ ವರದಿ ಮಾಡಿದ ಮೊದಲ ಪತ್ರಿಕೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The new Indian express) ಆಗಿದೆ.

Representational image
ಎಂಬಿಬಿಎಸ್ ವೈದ್ಯರಿಗೆ 2 ವರ್ಷದ ಫೆಲೋಶಿಪ್ ಕೋರ್ಸ್

ವರದಿಯ ನಂತರ, ನಾಲ್ಕು ಲಕ್ಷಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರನ್ನು ಪ್ರತಿನಿಧಿಸುವ ಭಾರತೀಯ ವೈದ್ಯಕೀಯ ಸಂಘ (IMA), ವಿಭಿನ್ನ ವೈದ್ಯಕೀಯ ವ್ಯವಸ್ಥೆಗಳನ್ನು ಅವೈಜ್ಞಾನಿಕವಾಗಿ ಬೆರೆಸುವ ಕ್ರಮವನ್ನು ಬಲವಾಗಿ ಖಂಡಿಸಿತು. ಸಾರ್ವಜನಿಕ ಹಿತಾಸಕ್ತಿಗಾಗಿ ಸರ್ಕಾರವು ಪ್ರತಿಗಾಮಿ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿತು.

ಕೇಂದ್ರ ಸಚಿವರ ಘೋಷಣೆಯ ಹೊರತಾಗಿಯೂ, ಕೇರಳ ಮೂಲದ ಕಾರ್ಯಕರ್ತ ಡಾ. ಕೆ. ವಿ. ಬಾಬು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ ನಂತರ ಜಿಪ್‌ಮರ್ ಕೋರ್ಸ್‌ನ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿತು.

ಇದಲ್ಲದೆ, ಜನವರಿ 25 ರ ಪತ್ರದಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿ. ಕೆ. ಪಾಲ್ ಅವರೊಂದಿಗೆ ಕಳೆದ ಹಲವಾರು ತಿಂಗಳುಗಳಿಂದ ಚರ್ಚೆಗಳು ನಡೆದಿವೆ ಎಂದು ಒಪ್ಪಿಕೊಂಡ ಆರೋವಿಲ್ಲೆ ಕಾರ್ಯದರ್ಶಿ ಡಾ. ಜಯಂತಿ ಎಸ್. ರವಿ; ಆಯುಷ್ ಕಾರ್ಯದರ್ಶಿ ಡಾ. ರಾಜೇಶ್ ಕೋಟೆಚಾ ಮತ್ತು ಇತರರು ಪದೇ ಪದೇ ಜ್ಞಾಪನೆಗಳನ್ನು ನೀಡಿದ್ದರೂ ಸಹ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಸಂಯೋಜಿತ ಕೋರ್ಸ್ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವಿಫಲರಾಗಿದ್ದರು.

ಭಾರತದಲ್ಲಿ ಯಾವುದೇ ಕಾನೂನಿನಡಿಯಲ್ಲಿ ಯಾವುದೇ ಕೋರ್ಸ್ ನಂತರ ಎಂಬಿಬಿಎಸ್ ಮತ್ತು ಬಿಎಎಂಎಸ್ ಪದವಿಗಳನ್ನು ಒಟ್ಟಿಗೆ ನೀಡಲು ಅವಕಾಶವಿಲ್ಲ. ಆರ್ ಟಿಐ ಬಳಸಿ ಪಡೆದ ಫೈಲ್‌ಗಳಿಂದ, ಜಿಪ್ಮರ್ ಮತ್ತು ಕೆಲವು ಉಪಗ್ರಹ ಕೇಂದ್ರಗಳ ಸಹಯೋಗದೊಂದಿಗೆ ಆರೋವಿಲ್ಲೆ ಫೌಂಡೇಶನ್‌ನಿಂದ ಎಂಬಿಬಿಎಸ್ ಮತ್ತು ಬಿಎಎಂಎಸ್ ನ ಎರಡು ಪದವಿಗಳನ್ನು ನೀಡುವ ಪ್ರಸ್ತಾಪವನ್ನು ಸರ್ಕಾರ ಬೆಂಬಲಿಸುತ್ತಿದೆ ಎಂದು ತೋರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com