
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಇತ್ತೀಚಿಗೆ ಅಕ್ಷಯ್ ಕುಮಾರ್ ಅವರೊಂದಿಗೆ ಪಾಲ್ಗೊಂಡಿದ್ದ 'ಬೀಚ್ ಸ್ವಚ್ಛತಾ' ಕಾರ್ಯಕ್ರಮದಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದಾರೆ.
ಅನೇಕ ನೆಟ್ಟಿಗರು ಆಕೆ ಧರಿಸಿದ್ದ ಬಟ್ಟೆ ಅಸಭ್ಯಕರವಾಗಿದ್ದು, ನೀತಿಯ ಪಾಠ ಹೇಳುವವರೆ ಈ ರೀತಿ ಉಡುಪು ಧರಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಮತ್ತೆ ಕೆಲವರು ಉಡುಪು ಧರಿಸಿವುದು ಆಕೆಯ ವೈಯಕ್ತಿಕ ಆಯ್ಕೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಜನರು ಪ್ರಶ್ನೆ ಮಾಡುವಂತಹದಲ್ಲಾ ಎಂದಿದ್ದಾರೆ. ಈ ಘಟನೆಯು ಸಾರ್ವಜನಿಕ ಸಮಾರಂಭಗಳಲ್ಲಿ ಡ್ರೆಸ್ ಕೋಡ್ ಬಗ್ಗೆ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಟ್ರೋಲಿಗೆ ಗುರಿಯಾದ ಅಮೃತಾ ಫಡ್ನವೀಸ್
ಗಣೇಶ ಚತುರ್ಥಿಯ 10 ದಿನಗಳ ಹಬ್ಬ ಮುಗಿಯುತ್ತಿದ್ದಂತೆಯೇ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಂತರ ಭಾನುವಾರ ಮುಂಬೈಯ ಜುಹು ಬೀಚ್ ನಲ್ಲಿ ಅಮೃತ ಫಡ್ನವೀಸ್ ಬೀಚ್ ಸ್ವಚ್ಛತೆಯ ಕಾರ್ಯಕ್ರಮ ಆಯೋಜಿಸಿದ್ದರು.
ಅಮೃತಾ ಫಡ್ನವೀಸ್ ಸ್ಥಾಪಿಸಿರುವ ಎನ್‌ಜಿಒ ದಿವ್ಯಾಜ್ ಫೌಂಡೇಶನ್ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ವಿಡಿಯೋಗಳು ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಅಮೃತಾ ಧರಿಸಿದ್ದ ಬಟ್ಟೆ ತೀರಾ ಕೆಟ್ಟದಾಗಿದೆ ಎಂದು ಟೀಕಿಸುತ್ತಿದ್ದಾರೆ. ಮತ್ತೆ ಕೆಲವರು ಅದು ಅವರ ಇಷ್ಟ ಎಂದು ಹೇಳುವ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರೆ.
Advertisement