ದೆಹಲಿ ಪೊಲೀಸರಿಂದ ವಿವಿಧ ರಾಜ್ಯಗಳಲ್ಲಿ ಐವರು ಉಗ್ರರ ಬಂಧನ: ಐಇಡಿ ತಯಾರಿಕೆಯ ಸ್ಫೋಟಕ ವಶ

ಇಬ್ಬರು ಭಯೋತ್ಪಾದಕರನ್ನು ಆಫ್ತಾಬ್ ಮತ್ತು ಸುಫಿಯಾನ್ ಎಂದು ಗುರುತಿಸಲಾಗಿದ್ದು, ಅವರು ಸ್ಫೋಟಕಗಳನ್ನು ತಯಾರಿಸುವಲ್ಲಿ ಪರಿಣಿತರು ಎಂದು ಹೆಸರಿಸಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ದೆಹಲಿ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ತಡರಾತ್ರಿ ನಡೆಸಿದ ದಾಳಿಯಲ್ಲಿ 5 ಐಸಿಸ್-ಸಂಬಂಧಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಈ ಭಯೋತ್ಪಾದಕರನ್ನು ವಿವಿಧ ರಾಜ್ಯಗಳಲ್ಲಿ ಬಂಧಿಸಲಾಗಿದೆ. ಇಬ್ಬರು ಶಂಕಿತರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬನನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ಐಇಡಿ ತಯಾರಿಕೆಗೆ ಬಳಸಿದ ಕೆಲವು ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿ, ಮುಂಬೈ ಮತ್ತು ಜಾರ್ಖಂಡ್‌ನಾದ್ಯಂತ ದಾಳಿ ನಡೆಸಲಾಗಿದೆ.

ಇಬ್ಬರು ಭಯೋತ್ಪಾದಕರನ್ನು ಆಫ್ತಾಬ್ ಮತ್ತು ಸುಫಿಯಾನ್ ಎಂದು ಗುರುತಿಸಲಾಗಿದ್ದು, ಅವರು ಸ್ಫೋಟಕಗಳನ್ನು ತಯಾರಿಸುವಲ್ಲಿ ಪರಿಣಿತರು ಎಂದು ಹೆಸರಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಬೊಕಾರೊದ ಪೆಟ್ವಾರ್ ನಿವಾಸಿ ಆಶರ್ ಡ್ಯಾನಿಶ್‌ನನ್ನು ರಾಂಚಿಯ ತಬಾರಕ್ ಲಾಡ್ಜ್‌ನಲ್ಲಿ ದೀರ್ಘಕಾಲದಿಂದ ತಂಗಿದ್ದನು.

ಮತ್ತೊಬ್ಬ ಆರೋಪಿ ಮುಂಬೈನ ಎಂಡಿ ಅಫ್ತಾಬ್‌ನನ್ನು ದಕ್ಷಿಣ ದೆಹಲಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡ್ಯಾನಿಶ್ ಈಗಾಗಲೇ ದೆಹಲಿ ಪೊಲೀಸರ ಪ್ರಕರಣದಲ್ಲಿ ಬೇಕಾಗಿದ್ದ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ರಾಜ್ಯಗಳಲ್ಲಿ ವಾರಗಳ ಕಾಲ ನಡೆದ ಕಣ್ಗಾವಲು ಮತ್ತು ಸಂಘಟಿತ ದಾಳಿಗಳ ನಂತರ ಈ ಬಂಧನಗಳು ನಡೆದಿವೆ. ವಿವಿಧ ನಗರಗಳಿಂದ ಆರರಿಂದ ಎಂಟು ಶಂಕಿತರನ್ನು ಬಂಧಿಸಿ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ವಾರಗಳಲ್ಲಿ, ನಿಷೇಧಿತ ಸಂಘಟನೆಗಳು ಮತ್ತು ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವ "ದೊಡ್ಡ ಭಯೋತ್ಪಾದಕ ಜಾಲ" ಎಂದು ಅಧಿಕಾರಿಗಳು ಹೇಳಿದ್ದು 12 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com