
ನವದೆಹಲಿ: ಇತ್ತೀಚಿಗೆ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್ ಆಸ್ತಿ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕರಿಷ್ಮಾ ಕಪೂರ್ ಅವರ ಮಕ್ಕಳು ಕೇಸ್ ದಾಖಲಿಸುವ ಮುನ್ನವೇ ಕುಟುಂಬ ಟ್ರಸ್ಟ್‌ನಿಂದ ಈಗಾಗಲೇ ರೂ. 1,900 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದಿದ್ದಾರೆ ಎಂದು ಪ್ರಿಯಾ ಕಪೂರ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಿಯಾ ಕಪೂರ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರು, ಈಗಾಗಲೇ ರೂ. 1,900 ಕೋಟಿ ಮೌಲ್ಯದ ಆಸ್ತಿಯನ್ನು ಕರಿಷ್ಮಾ ಕಪೂರ್ ಮಕ್ಕಳಿಗೆ ವರ್ಗಾಯಿಸಲಾಗಿದೆ. ಇನ್ನೇಷ್ಟು ಹಣ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು. ಮಕ್ಕಳಿಗೆ ಅವರ ತಂದೆ ಆಸ್ತಿಯಲ್ಲಿ ಪಾಲು ನೀಡಿಲ್ಲ. ಅವರ ನ್ಯಾಯಯುತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪಕ್ಕೆ ವಕೀಲರು ಈ ರೀತಿಯ ಹೇಳಿಕೆ ನೀಡಿದರು.
ರಸ್ತೆ ಬದಿಯಲ್ಲಿ ನಿಂತಿರುವ ವ್ಯಕ್ತಿಯ ಕೇಸ್ ನ್ನು ನ್ಯಾಯಾಲಯ ಪರಿಗಣಿಸಲು ಸಾಧ್ಯವಿಲ್ಲ. ಈಗಾಗಲೇ ಅವರು ರೂ. 1,900 ಕೋಟಿ ಸ್ವೀಕರಿಸಿದ್ದಾರೆ. ದೂರುದಾರರು ತಾವು ಏನನ್ನೂ ಸ್ವೀಕರಿಸಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.
ಆದಾಗ್ಯೂ, ಭಾರತೀಯ ಕಾನೂನಿನ ಅಡಿಯಲ್ಲಿ ಟ್ರಸ್ಟ್ ಸ್ವತ್ತುಗಳು ಮತ್ತು ವೈಯಕ್ತಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಭಾರತೀಯ ಟ್ರಸ್ಟ್‌ಗಳ ಕಾಯ್ದೆ 1882 ರ ಅಡಿಯಲ್ಲಿ ಟ್ರಸ್ಟ್‌ಗೆ ವರ್ಗಾಯಿಸಲಾದ ಸ್ವತ್ತುಗಳನ್ನು ಟ್ರಸ್ಟಿಗಳು ನಿರ್ವಹಿಸುತ್ತಾರೆ ಮತ್ತು ಅದರ ನಿಯಮಗಳಂತೆ ಆಸ್ತಿ ಪಡೆಯುತ್ತಾರೆ.
ಮತ್ತೊಂದೆಡೆ, ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಮತ್ತು ಭಾರತೀಯ ಉತ್ತರಾಧಿಕಾರ ಕಾಯ್ದೆ 1925 ರ ಮೂಲಕ ವೈಯಕ್ತಿಕ ಸ್ವತ್ತುಗಳ ಉತ್ತರಾಧಿಕಾರ ನಿಯಂತ್ರಿಸಲ್ಪಡುತ್ತದೆ. ಮಾನ್ಯವಾದ ವಿಲ್ ನಿಂದ ಹೊರಗಿಡದ ಹೊರತು ಉತ್ತರಾಧಿಕಾರಿಗಳು ತಮ್ಮ ಶಾಸನಬದ್ಧ ಪಾಲನ್ನು ಪಡೆಯಲು ಅರ್ಹರಾಗಿರುತ್ತಾರೆ.
Advertisement