
ನವದೆಹಲಿ: ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕ ಮನೆ ಮಾಡಿತು ಮತ್ತು ನ್ಯಾಯಾಧೀಶರು ಸಹ ಡಯಾಸ್ ನಿಂದ ಎದ್ದೇಳಬೇಕಾಯಿತು. ಅಲ್ಲದೆ ನ್ಯಾಯಾಲಯದ ಕೊಠಡಿಗಳನ್ನು ತೆರವುಗೊಳಿಸಲಾಯಿತು.
ಮೂಲಗಳ ಪ್ರಕಾರ, ರಿಜಿಸ್ಟ್ರಾರ್ ಜನರಲ್ ಅವರಿಗೆ ಇಂದು ಬೆಳಗ್ಗೆ 8.39 ಕ್ಕೆ ಇ-ಮೇಲ್ ಬಂದಿದ್ದು, ಕೆಲವು ನ್ಯಾಯಾಧೀಶರಿಗೆ ಅದರ ಬಗ್ಗೆ ತಿಳಿಸಲಾಗಿದೆ.
ಬೆದರಿಕೆ ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್ ಬಗ್ಗೆ ಉಲ್ಲೇಖಿಸಲಾಗಿದ್ದು, ಹೈಕೋರ್ಟ್ ಸಿಬ್ಬಂದಿಯನ್ನು ಉದ್ದೇಶಿಸಿ "ಪವಿತ್ರ ಶುಕ್ರವಾರದ ಸ್ಫೋಟಗಳಿಗೆ ಪಾಕಿಸ್ತಾನ ತಮಿಳುನಾಡು ಕೈಜೋಡಿಸಿದೆ. ನ್ಯಾಯಾಧೀಶರ ಕೊಠಡಿ/ಕೋರ್ಟ್ ಆವರಣದಲ್ಲಿ 3 ಬಾಂಬ್‌ಗಳನ್ನು ಇಡಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲರೂ ಸ್ಥಳಾಂತರಗೊಳ್ಳಿ" ಎಂದು ಬರೆಯಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ನ್ಯಾಯಾಲಯದ ಆವರಣದಲ್ಲಿದ್ದ ಎಲ್ಲರೂ ಅಲ್ಲಿಂದ ತೆರಳುವಂತೆ ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement