
ಮುಂಬೈ: ಕಾಂಡ್ಲಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ ಸ್ಪೈಸ್‌ಜೆಟ್ ವಿಮಾನದ ಚಕ್ರ ಕಳಚಿ ಬಿದ್ದಿದ್ದು, ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
"ಸೆಪ್ಟೆಂಬರ್ 12 ರಂದು, ಕಾಂಡ್ಲಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್ Q400 ವಿಮಾನದ ಹೊರ ಚಕ್ರವು ಟೇಕ್ ಆಫ್ ಆದ ನಂತರ ರನ್‌ವೇಯಲ್ಲಿ ಕಳಚಿ ಬಿದ್ದಿರುವುದು ಕಂಡುಬಂದಿದೆ. ಆದರೂ ವಿಮಾನ ಮುಂಬೈಗೆ ತನ್ನ ಪ್ರಯಾಣವನ್ನು ಮುಂದುವರೆಸಿತು ಮತ್ತು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ" ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸುರಕ್ಷಿತ ಲ್ಯಾಂಡಿಂಗ್ ನಂತರ, ವಿಮಾನವು ತನ್ನದೇ ಆದ ಶಕ್ತಿಯಿಂದ ಟರ್ಮಿನಲ್‌ಗೆ ಆಗಮಿಸಿತು ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸ್ಪೈಸ್‌ಜೆಟ್ Q400 ವಿಮಾನವು ಆರು ಟೈರ್‌ಗಳನ್ನು ಹೊಂದಿದೆ.
Advertisement