
ರಾಯಪುರ: ಛತ್ತೀಸ್‌ಗಢದ ರಾಜಧಾನಿ ರಾಯಪುರದಲ್ಲಿ ಹೈಪ್ರೋಫೈಲ್ 'ನಗ್ನ ಪಾರ್ಟಿ' ಆಮಂತ್ರಣ ಪೋಸ್ಟರ್, ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ಸೇರಿದಂತೆ ಬಂಧಿತರನ್ನು ಅಪರಾಧ ವಿಭಾಗದ ಪೊಲೀಸರ ತಂಡವು ವಿಚಾರಣೆ ನಡೆಸಿದೆ. ಖಾಸಗಿ ಫಾರ್ಮ್‌ಹೌಸ್‌ನಲ್ಲಿ ಆಯೋಜಿಸಿದ್ದ ಪಾರ್ಟಿ ಈಗ ರದ್ದಾಗಿದೆ. ಆಯೋಜಕರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಈ ಕಾರ್ಯಕ್ರಮಕ್ಕೆ 'ಅಪರಿಚಿತ ಪಕ್ಷ' ಎಂಬ ಅಡ್ಡಹೆಸರು ಇಡಲಾಗಿತ್ತು. ಸೆಪ್ಟೆಂಬರ್ 21 ರಂದು ಆಯೋಜಿಸಿದ್ದ 'ನಗ್ನ ಪಾರ್ಟಿ'ಯಲ್ಲಿ ಭಾಗವಹಿಸುವವರಿಗೆ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಲ್ಲದೇ, ಮದ್ಯ, ಮಾದಕ ವಸ್ತು ಸೇರಿದಂತೆ ಎಲ್ಲವೂ ದೊರೆಯತ್ತದೆ ಎಂದು ಅಮಿಷವೊಡ್ಡಲಾಗಿತ್ತು. ನಗ್ನ ಪಾರ್ಟಿಯ ಪೋಸ್ಟರ್ ವೈರಲ್ ಆದ ಬಳಿಕ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು.
ಇಬ್ಬರು ಬಂಧಿತರ ಮೊಬೈಲ್ ಫೋನ್‌ಗಳ ಪರಿಶೀಲಿಸಿದಾಗ ಮುಂಬೈ ಮತ್ತು ಬೆಂಗಳೂರಿನ ಕಲಾವಿದರೂ ಪಾರ್ಟಿಗೆ ಅಣಿಯಾದದ್ದು ಕಂಡುಬಂದಿದೆ. ಯುರೋಪ್ ಮತ್ತು ಯುಎಸ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ 'ಅಸಭ್ಯ ಗೆಟ್-ಟುಗೆದರ್ ಸಂಸ್ಕೃತಿ'ಯನ್ನು ರಾಯಪುರದಲ್ಲಿ ಪ್ರಾರಂಭಿಸಲು ಪ್ರಯತ್ನಿಸಲಾಗಿತ್ತು ಎಂದು ಅನೇಕ ಮಂದಿ ಹೇಳಿದ್ದಾರೆ.ಇಂತಹ ಯಾವುದೇ ಕಾರ್ಯಕ್ರಮ ನಿಷೇಧಿಸುವಂತೆ ಮತ್ತು ಆಯೋಜಕರ ವಿರುದ್ಧ ಕಠಿಣ ಕ್ರಮಕ್ಕೆ ರಾಜಕಾರಣಿಗಳಿಂದಲೂ ಒತ್ತಡ ಕೇಳಿಬಂದಿದೆ.
ರೂ. 40,000 ಪ್ರವೇಶ ಶುಲ್ಕ:
ಸೀಮಿತ ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಇಡೀ ಕಾರ್ಯಕ್ರಮವನ್ನು ಎಷ್ಟು ಗೌಪ್ಯವಾಗಿ ಇರಿಸಲಾಗಿದೆಯೆಂದರೆ ಸ್ಥಳದ ಬಗ್ಗೆ ಮಾಹಿತಿಯನ್ನು ಹೆಸರು ನೋಂದಾಯಿಸಿಕೊಂಡ ಸದಸ್ಯರಿಗೆ ಹಂಚಿಕೊಳ್ಳಲಾಗಿತ್ತು. ನೋಂದಣಿ ಪ್ರಕ್ರಿಯೆ ಮುಗಿದ ನಂತರ ಹೊರಗಿನವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲಾಗಿತ್ತು. ಪ್ರತಿ ವ್ಯಕ್ತಿಗೆ ಕೆಲವು ಆಫರ್‌ಗಳೊಂದಿಗೆ ನಗ್ನ ಪಾರ್ಟಿಯ ಪ್ರವೇಶ ಶುಲ್ಕವನ್ನು ರೂ. 40,000 ರೂ.ಗೆ ನಿಗದಿಪಡಿಸಲಾಗಿದೆ. ಕೆಲವು ಜೋಡಿಗಳಿಗೆ ರೂ. 1 ಲಕ್ಷ ನಿಗದಿಪಡಿಸಲಾಗಿತ್ತು.
"ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಆಮಂತ್ರಣ ಪೋಸ್ಟರ್ ಕುರಿತು ರಾಯ್‌ಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಂತಹ ಪಾರ್ಟಿಯನ್ನು ಏಕೆ ಯೋಜಿಸಲಾಗಿದೆ ಮತ್ತು ಅದರ ಹಿಂದಿರುವ ವ್ಯಕ್ತಿಗಳು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಂತಹ ಕಾರ್ಯಕ್ರಮಕ್ಕೆ ಎಂದಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೇದ್ ಸಿಂಗ್ ಹೇಳಿದ್ದಾರೆ.
"ಇದು ಆಘಾತಕಾರಿ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಬಿಜೆಪಿ ಆಡಳಿತದಲ್ಲಿ ಛತ್ತೀಸ್‌ಗಢದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪಾರ್ಟಿಯ ಆಯೋಜನೆಗೆ ಯತ್ನ ನಡೆದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಹೇಳಿದ್ದಾರೆ. ರಾಜ್ಯ ಬಿಜೆಪಿ ಕೂಡ ಕಳವಳ ವ್ಯಕ್ತಪಡಿಸಿದ್ದು, "ನಗ್ನ ಪಾರ್ಟಿ" ಆಯೋಜಿಸುವ ಕ್ರಮವನ್ನು ಖಂಡಿಸಿದೆ.
Advertisement