ಸಂಪುಟ ಪುನರ್ರಚನೆಗೂ ಮುನ್ನ ಮೇಘಾಲಯದ 8 ಸಚಿವರು ರಾಜೀನಾಮೆ

ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದವರು ಮಂಗಳವಾರ ಸಂಜೆ ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
8 Meghalaya ministers resign ahead of cabinet reshuffle
ಕನ್ರಾಡ್ ಕೆ. ಸಂಗ್ಮಾ
Updated on

ಶಿಲ್ಲಾಂಗ್: ಮೇಘಾಲಯ ಸಚಿವ ಸಂಪುಟ ಪುನರ್ರಚನೆಗೆ ಮುನ್ನ ಹಿರಿಯ ನಾಯಕರಾದ ಎ.ಎಲ್. ಹೆಕ್, ಪಾಲ್ ಲಿಂಗ್ಡೋ ಮತ್ತು ಅಂಪರೀನ್ ಲಿಂಗ್ಡೋ ಸೇರಿದಂತೆ ಒಟ್ಟು 12 ಸಚಿವರಲ್ಲಿ ಎಂಟು ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಪಿಪಿ ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಮಂಗಳವಾರ ತಮ್ಮ ಸಂಪುಟ ಪುನರ್ರಚನೆ ಮಾಡುತ್ತಿದ್ದು, ಅದಕ್ಕು ಮುನ್ನ ರಾಜಭವನದಲ್ಲಿ ರಾಜ್ಯಪಾಲ ಸಿ ಎಚ್ ವಿಜಯಶಂಕರ್ ಅವರನ್ನು ಭೇಟಿ ಮಾಡಿ ಸಚಿವರ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು ಎಂದು ಅವರು ಹೇಳಿದ್ದಾರೆ.

ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದವರು ಮಂಗಳವಾರ ಸಂಜೆ ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

8 Meghalaya ministers resign ahead of cabinet reshuffle
ರಾಜಾ ರಘುವಂಶಿ ಹತ್ಯೆ ಪ್ರಕರಣ: ಮೇಘಾಲಯ ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ

"ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ ಎಂಟು ಸಚಿವರು ಎನ್‌ಪಿಪಿಯ ಅಂಪಾರೀನ್ ಲಿಂಗ್ಡೋ, ಕಮಿಂಗೋನ್ ಯಂಬೋನ್, ರಕ್ಕಮ್ ಎ ಸಂಗ್ಮಾ ಮತ್ತು ಅಬು ತಾಹೆರ್ ಮೊಂಡಲ್, ಯುಡಿಪಿಯ ಪಾಲ್ ಲಿಂಗ್ಡೋ ಮತ್ತು ಕಿರ್ಮೆನ್ ಶಿಲ್ಲಾ, ಎಚ್‌ಎಸ್‌ಪಿಡಿಪಿಯ ಶಕ್ಲಿಯಾರ್ ವಾರ್ಜ್ರಿ ಮತ್ತು ಬಿಜೆಪಿಯ ಎಎಲ್ ಹೆಕ್" ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com