
ಡೆಹ್ರಾಡೂನ್: ಉತ್ತರಾಖಂಡನಾದ್ಯಂತ, ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್‌ನಲ್ಲಿ, ತೀವ್ರ ಮಳೆ ಪ್ರವಾಹದಿಂದ ವಿನಾಶವುಂಟಾಗಿದೆ. ಸರಣಿ ಮೇಘ ಸ್ಫೋಟಗಳು ಮತ್ತು ನಿರಂತರ ಮಳೆಗೆ ಇದುವರೆಗೆ 17 ಮಂದಿ ಮೃತಪಟ್ಟು20 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಸೋಮವಾರ ರಾತ್ರಿ ಪ್ರಾರಂಭವಾದ ಭೀಕರ ಮಳೆಯು ವ್ಯಾಪಕ ಹಾನಿಯನ್ನುಂಟುಮಾಡಿದೆ. ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಕೊಚ್ಚಿಹೋಗಿವೆ. ನದಿಗಳು ಪ್ರವಾಹಗಳಾಗಿ ಮಾರ್ಪಟ್ಟಿವೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಮೂಲಗಳ ಪ್ರಕಾರ, ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ನದಿಗಳಲ್ಲಿ ಕೊಚ್ಚಿಹೋಗಿ ಮತ್ತು ವಿವಿಧ ಸ್ಥಳಗಳಲ್ಲಿ ಅವಶೇಷಗಳ ಅಡಿಯಲ್ಲಿ ಹೂತು ಹದನೇಳು ಮಂದಿ ಮೃತಪಟ್ಟಿದ್ದಾರೆ, 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ" ಎಂದು ಎಸ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಮೌತ್ ನದಿಯಿಂದ ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ.
ಸಹಸ್ರಧಾರ ಮತ್ತು ಮಾಲ್ದೇವ್ತಾ ಪ್ರದೇಶಗಳು ಹೆಚ್ಚು ಹಾನಿಗೀಡಾಗಿವೆ. ರಿಸ್ಪಾನಾ ಮತ್ತು ಬಿಂದಾಲ್ ನಂತಹ ನದಿಗಳು ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿದ್ದು, ಹಲವಾರು ಪ್ರದೇಶಗಳು ಪ್ರವಾಹಕ್ಕೆ ಮುಳುಗಿವೆ. ಮನೆಗಳು ಅವಶೇಷಗಳಿಂದ ಮುಳುಗಿವೆ. ಅನೇಕ ಅಂಗಡಿ ಮತ್ತು ಹೊಟೇಲ್ ಗಳು ಸಹ ಉಕ್ಕಿ ಹರಿಯುತ್ತಿರುವ ನೀರಿನಿಂದ ಕೊಚ್ಚಿ ಹೋಗಿವೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಲ್ದೇವ್ತಾ ಮತ್ತು ಕೇಸರ್ವಾಲಾ ಮುಂತಾದ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಪ್ರವಾಹ ಪೀಡಿತ ಕುಟುಂಬಗಳಿಗೆ ಸಂಪೂರ್ಣ ಸರ್ಕಾರದ ಬೆಂಬಲದ ಭರವಸೆ ನೀಡಿದರು.
ಸಹಸ್ರಧಾರಾದ ಕಾರ್ಲಿಗಾಡ್ ಪ್ರದೇಶದಲ್ಲಿ, ನೀರಿನಲ್ಲಿ ಮಣ್ಣು ಕೊಚ್ಚಿ ಹೋಗಿ 8 ಅಂಗಡಿಗಳು ಮತ್ತು ಹೋಟೆಲ್ ಕೊಚ್ಚಿಹಾಕಿ, ಇಬ್ಬರು ಕಾಣೆಯಾಗಿದ್ದಾರೆ. ಡಿಐಟಿ ಕಾಲೇಜು ಬಳಿಯ ಗ್ರೀನ್ ವ್ಯಾಲಿ ಪಿಜಿಯಲ್ಲಿ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಅವರ ಶವವನ್ನು ಎಸ್‌ಡಿಆರ್‌ಎಫ್ ಹೊರತೆಗೆದಿದೆ.
ಊದಿಕೊಂಡ ಆಸನ್ ನದಿಯಲ್ಲಿ 20 ಜನರು ಕೊಚ್ಚಿಹೋಗಿದ್ದಾರೆ, ಐದು ಶವಗಳು ಪತ್ತೆಯಾಗಿವೆ. ತಪಕೇಶ್ವರದ ಶಿಖರ್ ಫಾಲ್ಸ್‌ನಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಮಸ್ಸೂರಿಯ ಝರಿಪಾನಿ ಟೋಲ್ ಪ್ಲಾಜಾದಲ್ಲಿ ಭೂಕುಸಿತದಲ್ಲಿ ಓರ್ವ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲ್ಸಿ-ಚಕ್ರತ ಮೋಟಾರ್ ರಸ್ತೆಯಲ್ಲಿ ಕಲ್ಲು ಬಿದ್ದು ಮತ್ತೊಬ್ಬ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.
ಡೆಹ್ರಾಡೂನ್-ಪೌಂಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ 'ನಂದಾ ಕಿ ಚೌಕಿ' ಬಳಿಯ ಸೇತುವೆ ಕೊಚ್ಚಿಹೋಗಿದ್ದು, ಸಂಚಾರ ಸ್ಥಗಿತಗೊಂಡಿದೆ. ವ್ಯಾಪಕ ಭೂಕುಸಿತಗಳಿಂದಾಗಿ ಮಸ್ಸೂರಿ-ಡೆಹ್ರಾಡೂನ್ ರಸ್ತೆಯನ್ನು ಹಲವಾರು ಹಂತಗಳಲ್ಲಿ ಮುಚ್ಚಲಾಗಿದೆ.
ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಡೆಹ್ರಾಡೂನ್‌ನ ಪೌಂಧದಲ್ಲಿರುವ ದೇವಭೂಮಿ ಇನ್ಸ್ಟಿಟ್ಯೂಟ್ ಕ್ಯಾಂಪಸ್‌ನಲ್ಲಿ ಸುಮಾರು 200 ವಿದ್ಯಾರ್ಥಿಗಳು ನೀರಿನ ಹರಿವಿನಲ್ಲಿ ಸಿಲುಕಿಕೊಂಡಿದ್ದು, ಎಸ್‌ಡಿಆರ್‌ಎಫ್ ತಂಡಗಳು ತ್ವರಿತ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ರಾತ್ರಿಯಿಡೀ ಪೀಡಿತ ಸ್ಥಳಗಳಿಗೆ ನಿಯೋಜಿಸಲಾಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಾಣೆಯಾದವರಿಗಾಗಿ ಪರಿಹಾರ ಮತ್ತು ಶೋಧ ಕಾರ್ಯಾಚರಣೆಗಾಗಿ ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.
Advertisement