
ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಆರ್ಥಿಕತೆಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಇದು ಜನರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇಲ್ಲದಿದ್ದರೆ ಅದು ತೆರಿಗೆಗಳಾಗಿ ಹೋಗುತ್ತಿತ್ತು ಎಂದಿದ್ದಾರೆ.
ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಕುರಿತು ಜನ ಸಂಪರ್ಕ ಮತ್ತು ಸಂವಹನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತೆರಿಗೆ ಸುಧಾರಣೆಗಳ ನಂತರ, ಶೇಕಡಾ 12 ರಷ್ಟು ಜಿಎಸ್‌ಟಿ ಸ್ಲ್ಯಾಬ್‌ನಲ್ಲಿರುವ ಶೇಕಡಾ 99ರಷ್ಟು ಸರಕುಗಳು ಶೇಕಡಾ ಐದಕ್ಕೆ ತಲುಪಿವೆ ಎಂದು ಹೇಳಿದರು. ಈ ಪುನರ್ರಚನೆಯು ಶೇಕಡಾ 28 ರಷ್ಟು ತೆರಿಗೆ ಸ್ಲ್ಯಾಬ್‌ನಲ್ಲಿರುವ ಶೇಕಡಾ 90ರಷ್ಟು ವಸ್ತುಗಳು ಶೇಕಡಾ 18 ಕ್ಕೆ ಇಳಿಯಲು ಕಾರಣವಾಗಿದೆ ಎಂದರು.
ಸರ್ಕಾರದ ಹೊಸ ಪೀಳಿಗೆಯ ತೆರಿಗೆ ಪದ್ಧತಿಯೊಂದಿಗೆ, ಕೇವಲ ಎರಡು ಸ್ಲ್ಯಾಬ್‌ಗಳೊಂದಿಗೆ (ಶೇಕಡಾ 5 ಮತ್ತು 18), ಆರ್ಥಿಕತೆಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ಸೇರಿಸುತ್ತದೆ. ಜನರ ಕೈಯಲ್ಲಿ ನಗದು ಹರಿಯುತ್ತವೆ ಎಂದು ಅವರು ಹೇಳಿದರು. ತೆರಿಗೆದಾರರ ಸಂಖ್ಯೆ ಹಿಂದಿನ 65 ಲಕ್ಷದಿಂದ 1.51 ಕೋಟಿಗೆ ಏರಿಕೆಯಾಗಿದೆ ಎಂದರು.
Advertisement