ಉತ್ತರ ಪ್ರದೇಶ: ಕೆಟ್ಟು ನಿಂತಿದ್ದ ಎಸ್‌ಯುವಿಗೆ ಅಪರಿಚಿತ ವಾಹನ ಡಿಕ್ಕಿ; ನಾಲ್ವರು ಸಾವು

ಗಂಗಾ ನಗರ ಪ್ರದೇಶದ ಬಿಗಾಹಿಯಾ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಉಪ ಪೊಲೀಸ್ ಆಯುಕ್ತ(ಗಂಗಾ ನಗರ) ಕುಲದೀಪ್ ಗುಣವತ್ ಅವರು ಪಿಟಿಐಗೆ ತಿಳಿಸಿದ್ದಾರೆ.
Four killed, three injured as unidentified vehicle rams into stationary SUV in UP's Prayagraj
ಸಾಂದರ್ಭಿಕ ಚಿತ್ರ
Updated on

ಪ್ರಯಾಗರಾಜ್: ಕಾನ್ಪುರ-ವಾರಣಾಸಿ ಹೆದ್ದಾರಿಯಲ್ಲಿ ಸೋಮವಾರ ಅಪರಿಚಿತ ವಾಹನವೊಂದು, ಕೆಟ್ಟು ನಿಂತಿದ್ದ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಾ ನಗರ ಪ್ರದೇಶದ ಬಿಗಾಹಿಯಾ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಉಪ ಪೊಲೀಸ್ ಆಯುಕ್ತ(ಗಂಗಾ ನಗರ) ಕುಲದೀಪ್ ಗುಣವತ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಎಸ್‌ಯುವಿ ಕೆಟ್ಟು ರಸ್ತೆಬದಿಯಲ್ಲಿ ನಿಂತಿತ್ತು. ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಕಾರಿನ ಮುಂದೆ ಮಲಗಿದ್ದರು ಮತ್ತು ಮೂವರು ಮಹಿಳೆಯರು ಒಳಗೆ ವಿಶ್ರಾಂತಿ ಪಡೆಯುತ್ತಿದ್ದರು.

Four killed, three injured as unidentified vehicle rams into stationary SUV in UP's Prayagraj
ಉತ್ತರ ಪ್ರದೇಶ: ಟ್ರೈನಿ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ; ನೊಂದ 9ನೇ ತರಗತಿ ಬಾಲಕಿ ಆತ್ಮಹತ್ಯೆ

ಮೃತರನ್ನು ಕಾನ್ಪುರ ನಿವಾಸಿಗಳಾದ ಸುರೇಶ್ ಸೈನಿ, ಸುರೇಶ್ ಬಾಜ್‌ಪೈ, ಅವರ ಪತ್ನಿ ಮತ್ತು ರಾಮಸಾಗರ್ ಅವಸ್ಥಿ ಎಂದು ಗುರುತಿಸಲಾಗಿದೆ ಎಂದು ಗುಣವತ್ ಹೇಳಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನದ ಚಾಲಕನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com