'RJD ಯಾವತ್ತೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ': ಬಿಹಾರ ಮಹಿಳೆಯರಿಗೆ ಪ್ರಧಾನಿ ಮೋದಿ ಕರೆ

ಬಿಹಾರದ ಮಹಿಳೆಯರಿಗೆ ಈಗ ಇಬ್ಬರು ಸಹೋದರರು, ಒಬ್ಬರು ನಿತೀಶ್ ಕುಮಾರ್, ಮತ್ತೊಬ್ಬರು ಮೋದಿ.
PM Narendra Modi
ಪ್ರಧಾನಿ ನರೇಂದ್ರ ಮೋದಿ online desk
Updated on

ನವದೆಹಲಿ: ಆರ್‌ಜೆಡಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರಕ್ಕೆ ಮರಳಲು ಯಾವತ್ತೂ ಅವಕಾಶ ನೀಡಬಾರದು. ಏಕೆಂದರೆ ಅವರ ಹಿಂದಿನ ಸರ್ಕಾರ ವಿಶೇಷವಾಗಿ ಮಹಿಳೆಯರಿಗೆ ಅಪಾರ ಕಷ್ಟಗಳನ್ನು ಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಹಾರದ ಮಹಿಳೆಯರಿಗೆ ಹೇಳಿದರು.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ, "ಒಬ್ಬ ಮಹಿಳೆ ಪ್ರಗತಿ ಸಾಧಿಸಿದಾಗ, ಇಡೀ ಸಮಾಜವು ಮುಂದುವರಿಯುತ್ತದೆ. ಸರ್ಕಾರ ಮಹಿಳೆಯರನ್ನು ಕೇಂದ್ರದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಿದಾಗ, ಅದರ ಪ್ರಯೋಜನಗಳು ಸಮಾಜದ ಇತರ ಭಾಗಗಳಿಗೂ ವಿಸ್ತರಿಸುತ್ತವೆ. ಉಜ್ವಲ ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಈಗ ಪ್ರಪಂಚದಾದ್ಯಂತ ಗುರುತಿಸಲಾಗುತ್ತಿದೆ" ಎಂದು ಅವರು ಹೇಳಿದರು.

ಪ್ರತಿಯೊಬ್ಬ ಮಹಿಳೆಯನ್ನು ಸಬಲೀಕರಣಗೊಳಿಸಲು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಪ್ರಾರಂಭಿಸಲಾಗಿದೆ. ಇದು ಈಗಾಗಲೇ ಈ ಉಪಕ್ರಮದಲ್ಲಿ ದಾಖಲಾಗಿರುವ ಸುಮಾರು 75 ಲಕ್ಷ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತಿದೆ. ಈ ಮಹಿಳೆಯರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ 10,000 ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

PM Narendra Modi
ನಾಳೆ ಪ್ರಧಾನಿ ಮೋದಿಯಿಂದ ಬಿಹಾರದ 75 ಲಕ್ಷ ಮಹಿಳೆಯರಿಗೆ ತಲಾ 10 ಸಾವಿರ ರೂ ವರ್ಗಾವಣೆ

"ಬಿಹಾರದ ಮಹಿಳೆಯರಿಗೆ ಈಗ ಇಬ್ಬರು ಸಹೋದರರು, ಒಬ್ಬರು ನಿತೀಶ್ ಕುಮಾರ್, ಮತ್ತೊಬ್ಬರು ಮೋದಿ ಇದ್ದಾರೆ. ಈ ಇಬ್ಬರೂ ಸುಧಾರಣೆಗಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಮೋದಿ ಹೇಳಿದರು.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯ ಹಿಂದಿನ ದೃಷ್ಟಿಕೋನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಪ್ರತಿ ಕುಟುಂಬವು ಈ ಯೋಜನೆಯಡಿಯಲ್ಲಿ ಕನಿಷ್ಠ ಒಬ್ಬ ಮಹಿಳಾ ಫಲಾನುಭವಿಯನ್ನು ಹೊಂದಿರಬೇಕು ಎಂದು ಒತ್ತಿ ಹೇಳಿದರು.

ಪ್ರತಿ ಫಲಾನುಭವಿಯು ನೇರ ವರ್ಗಾವಣೆಯ ಮೂಲಕ 10,000 ರೂ.ಗಳ ಆರಂಭಿಕ ಅನುದಾನವನ್ನು ಪಡೆಯುತ್ತಾರೆ, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಬೆಂಬಲ ನೀಡು ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com