
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಆಡಳಿತ 11 ವರ್ಷಗಳ ಹಿಂದೆಯೇ 'ಸ್ವಚ್ಛ ಭಾರತ' ಅಭಿಯಾನ ಆರಂಭಿಸಿದ್ದರೂ ರಷ್ಯಾದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ತೀವ್ರ ಚರ್ಚೆ ಹುಟ್ಟುಹಾಕಿದೆ. ಇದೇನಾ ಸ್ವಚ್ಛ ಭಾರತ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಹೌದು. ಅಟ್ಟಾರಿ- ವಾಘಾ ಗಡಿಯಲ್ಲಿನ ಮಿಲಿಟರಿ ಕಾರ್ಯಕ್ರಮದ ವಿಡಿಯೋವನ್ನು ರಷ್ಯಾದ ಪ್ರವಾಸಿ ಅಮಿಯಾನಾ ಫೈಂಡ್ಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿನ ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ವಿಡಿಯೋದಲ್ಲಿ ಏನಿದೆ?
ಅಂದಹಾಗೆ, ಸಮಾರಂಭದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಐಸ್ ಕ್ರೀಮ್ ತಿಂದು, ಅದರ ಸುತ್ತಲಿನ ಪೇಪರ್ ನ್ನು ಕಸದ ಡಬ್ಬಿಗೆ ಹಾಕುವ ಬದಲು ಮುಂದಿನ ಸೀಟಿಗೆ ತಳ್ಳುವುದು ವಿಡಿಯೋದಲ್ಲಿದೆ.
ಸುಮಾರು ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ
ಅಮಿಯಾನಾ ಫೈಂಡ್ಸ್‌ಗೆ "ಕೆಲವರು ಯಾಕೆ ಹೀಗೆ?" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತಗತಿಯಲ್ಲಿ ವೈರಲ್ ಆಗಿದ್ದು, ವ್ಯಾಪಕವಾದ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಫೈಂಡ್ಸ್ ಅದನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಂತೆ ಆ ವ್ಯಕ್ತಿ ಪದೇ ಪದೇ ಅದೇ ರೀತಿ ಮಾಡಿದ್ದಾನೆ. ಈ ವಿಡಿಯೋ ಸುಮಾರು ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ನೂರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆಯ ಕೊರತೆಗಾಗಿ ಕೆಲವರು ಕ್ಷಮೆಯಾಚಿಸಿದರೆ, ಮತ್ತೆ ಕೆಲವರು ಇದನ್ನು ಸಂಪೂರ್ಣವಾಗಿ ಜಾಗೃತಿ ಸಮಸ್ಯೆ ಎಂದು ಹೇಳಿದ್ದಾರೆ.
Advertisement