
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಂತೆ ಟಿವಿಕೆ ಸಂಸ್ಥಾಪಕ ವಿಜಯ್ ಗೆ ಸಂಕಷ್ಟ ಎದುರಾಗಿದೆ.
ಕರೂರಿನಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತದ ಘಟನೆ ಕುರಿತು ಸಂಪೂರ್ಣವಾಗಿ ತನಿಖೆ ನಡೆಯುವವರೆಗೂ ವಿಜಯ್ ಅವರ TVK ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಡೆ ನೀಡುವಂತೆ ಸಂತ್ರಸ್ತರೊಬ್ಬರೊಬ್ಬರು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಈ ಸಂಬಂಧ ಘಟನೆಯಲ್ಲಿ ಗಾಯಗೊಂಡಿರುವ ಅರ್ಜಿದಾರ ಸೆಂಥಿಲಕಣ್ಣನ್ ಎಂಬವರು ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದುರಂತದ ಹೊಣೆಗಾರಿಕೆಯನ್ನು ವಹಿಸುವವರೆಗೂ ಮತ್ತು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೆ ಟಿವಿಕೆಯ ಸಭೆಗಳು, ರ‍್ಯಾಲಿಗೆ ಅಥವಾ ರಾಜಕೀಯ ಸಭೆಗಳಿಗೆ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಅನುಮತಿ ನೀಡದಂತೆ ತಡೆಯಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಈ ಮಧ್ಯೆ ಕರೂರು ರ‍್ಯಾಲಿಯಲ್ಲಿ 10 ಮಕ್ಕಳು ಸೇರಿದಂತೆ 40 ಜನರು ಸಾವನ್ನಪ್ಪಿದ ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭಾನುವಾರ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.
ಈ ದುರಂತ ಆಕಸ್ಮಿಕವಲ್ಲ, ಬದಲಾಗಿ "ಪಿತೂರಿ"ಯ ಪರಿಣಾಮ ಎಂದು ಪಕ್ಷ ಆರೋಪಿಸಿದೆ. ಜನಸಮೂಹದ ಮೇಲೆ ಕಲ್ಲು ತೂರಾಟ ಮತ್ತು ಸ್ಥಳದಲ್ಲಿ ಪೊಲೀಸ್ ಲಾಠಿ ಚಾರ್ಜ್ ಅನ್ನು ಘಟನೆಗೆ ಕಾರಣ ಎಂದು ತೋರಿಸಿದೆ.
Advertisement