ಬಾರಾಮತಿ ಉಪಚುನಾವಣೆ: ಸುನೇತ್ರಾ ಅವಿರೋಧ ಆಯ್ಕೆ ಬಯಸುತ್ತಿರುವ ಫಡ್ನವೀಸ್, ಸುಪ್ರಿಯಾ; ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್ ಗೆ ಒತ್ತಾಯ!

ಅಜಿತ್ ದಾದಾ ಅವರ ರಾಜಕೀಯ ಪ್ರಯಾಣವು ಕಾಂಗ್ರೆಸ್ ಪಕ್ಷದೊಂದಿಗೆ ಪ್ರಾರಂಭವಾಯಿತು ಮತ್ತು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಅದರೊಂದಿಗೆ ದೀರ್ಘಕಾಲದ, ಗೌರವಾನ್ವಿತ ಸಂಬಂಧವನ್ನು ಉಳಿಸಿಕೊಂಡಿದ್ದರು.
Devendra Fadnavis, sunetra pawar and Supriya Sule
ದೇವೇಂದ್ರ ಫಡ್ನವೀಸ್, ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ
Updated on

ಮುಂಬಯಿ: ಎನ್‌ಸಿಪಿ ನಾಯಕ ಅಜಿತ್ ಪವಾರ್ ಅಕಾಲಿಕ ನಿಧನದ ಬಳಿಕ ತೆರವಾದ ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದೊಳಗೆ ಭಾರಿ ಬಿರುಕು ಮೂಡಿಸಿದ್ದು, ಅಜಿತ್​ ದಾದಾ ಪತ್ನಿ ಸುನೇತ್ರಾ ಪವಾರ್ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಡಿಸಿಎಂ ದಿವಂಗತ ಅಜಿತ್ ಪವಾರ್ ಅವರಿಗೆ ಗೌರವ ನೀಡುವ ಉದ್ದೇಶದಿಂದ ಒಗ್ಗಟ್ಟಿನಿಂದ ಬಾರಾಮತಿಯಲ್ಲಿ ಅವಿರೋಧ ಆಯ್ಕೆ ಮಾಡಬೇಕೆಂದು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಅವರೊಂದಿಗೆ ಚರ್ಚಿಸಿದ್ದಾರೆ. ಬಾರಾಮತಿಯಿಂದ ಕಣಕ್ಕಿಳಿದಿರುವ ಅಜಿತ್ ಪವಾರ್ ಸುನೇತ್ರಾ ಪವಾರ್ ವಿರುದ್ಧ ಕಣಕ್ಕಿಳಿದಿರುವ ಅಭ್ಯರ್ಥಿಯ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಬಾರಾಮತಿಯಲ್ಲಿ ಅವಿರೋಧ ಚುನಾವಣೆ ಅಜಿತ್ ದಾದಾ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ, ಬಾರಾಮತಿ ವಿಧಾನಸಭಾ ಕ್ಷೇತ್ರವು ಉಪಚುನಾವಣೆ ಎದುರಿಸುತ್ತಿದೆ.

Devendra Fadnavis, sunetra pawar and Supriya Sule
ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್‌ಗಿಂತ ಸುನೇತ್ರಾ ಪವಾರ್ ಶ್ರೀಮಂತೆ; ಕುಟುಂಬದಲ್ಲಿಯೇ ಸುಪ್ರಿಯಾ ಸುಳೆ ಆಸ್ತಿ ಅಧಿಕ!

ಅಜಿತ್ ದಾದಾ ಅವರ ರಾಜಕೀಯ ಪ್ರಯಾಣವು ಕಾಂಗ್ರೆಸ್ ಪಕ್ಷದೊಂದಿಗೆ ಪ್ರಾರಂಭವಾಯಿತು ಮತ್ತು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಅದರೊಂದಿಗೆ ದೀರ್ಘಕಾಲದ, ಗೌರವಾನ್ವಿತ ಸಂಬಂಧವನ್ನು ಉಳಿಸಿಕೊಂಡಿದ್ದರು. ದುಃಖ ಈ ಸಮಯದಲ್ಲಿ, ಬಾರಾಮತಿಯಲ್ಲಿ ಅವಿರೋಧವಾಗಿ ಚುನಾವಣೆ ನಡೆಯುವುದು ಅವರ ಸಾರ್ವಜನಿಕ ಸೇವೆ ಮತ್ತು ಎಲ್ಲರನ್ನೂ ಒಳಗೊಳ್ಳುವ ರಾಜಕೀಯದ ಪರಂಪರೆಗೆ ಸಲ್ಲಿಸುವ ಗೌರವವಾಗಿದೆ. ಒಗ್ಗಟ್ಟಿನ ಮನೋಭಾವದಿಂದ ಈ ಬೇಡಿಕೆಯನ್ನು ಪರಿಗಣಿಸುವಂತೆ ನಾನು ಕಾಂಗ್ರೆಸ್ ನಾಯಕರಿಗೆ ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ, ಶರದ್ ಪವಾರ್, ರೋಹಿತ್ ಪವಾರ್ ಕೂಡ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿರುವ ಸುನೇತ್ರಾ ಅವರ ಅವಿರೋಧ ಗೆಲುವಿಗಾಗಿ ಒತ್ತಾಯಿಸಿದ್ದಾರೆ. ಬುಧವಾರ, ಸುನೇತ್ರಾ ಪವಾರ್ ಈ ಸಂಬಂಧ ಸಪ್ಕಲ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಚರ್ಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಏಪ್ರಿಲ್ 6 ರಿಂದ ಅವರು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರೊಂದಿಗೆ ಎರಡು ಬಾರಿ ಮಾತನಾಡಿ ಅವಿರೋಧವಾಗಿ ಆಯ್ಕೆಯಾಗುವಂತೆ ವಿನಂತಿಸಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com