ಪ. ಬಂಗಾಳ ಚುನಾವಣೆ: ಬಿಜೆಪಿ ಗೆದ್ದರೆ ಆರು ಗ್ಯಾರಂಟಿಗಳ ಜಾರಿಗೆ ಪ್ರಧಾನಿ ಮೋದಿ ವಾಗ್ದಾನ, ಟಿಎಂಸಿ ಕಿತ್ತೊಗೆಯಲು ಮತದಾರರಿಗೆ ಕರೆ!

ಟಿಎಂಸಿಯ ಭ್ರಷ್ಟಾಚಾರ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಎಲ್ಲಾ ಫೈಲ್‌ಗಳನ್ನು ಬಿಜೆಪಿ ಮತ್ತೆ ತೆರೆಯುತ್ತದೆ ಮತ್ತು ಅಕ್ರಮದಲ್ಲಿ ತೊಡಗಿರುವ ಎಲ್ಲಾ ನಾಯಕರನ್ನು ಜೈಲಿಗೆ ಹಾಕಲಾಗುವುದು ಎಂದು ಮೋದಿ ವಾಗ್ದಾನ ಮಾಡಿದರು.
PM Modi
ಪ್ರಧಾನಿ ಮೋದಿ
Updated on

ಹಲ್ಡಿಯಾ: ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭರವಸೆ ನೀಡಿದ್ದಾರೆ. ದುರಾಡಳಿತಕ್ಕಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಮತದಾರರನ್ನು ಒತ್ತಾಯಿಸಿದರು.

ವಿಪಕ್ಷ ನಾಯಕ ಸುವೇಂದು ಅಧಿಕಾರಿಯ ಭದ್ರಕೋಟೆ ಹಲ್ದಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಆಡಳಿತಾರೂಢ ರಾಜ್ಯ ಸರ್ಕಾರ ಬಂಗಾಳವನ್ನು ಹಿಂದಕ್ಕೆ ಎಳೆಯುತ್ತಿದೆ. ಬಿಜೆಪಿ ಸರ್ಕಾರ ಟಿಎಂಸಿಯ ಭಯದ ಆಡಳಿತವನ್ನು ನಂಬಿಕೆಯಿಂದ ಬದಲಾಯಿಸುತ್ತದೆ. ಆದರೆ ಎಲ್ಲಾ ಸಾರ್ವಜನಿಕ ಸೇವಕರನ್ನು ಜನರಿಗೆ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಟಿಎಂಸಿಯ ಭ್ರಷ್ಟಾಚಾರ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಎಲ್ಲಾ ಫೈಲ್‌ಗಳನ್ನು ಬಿಜೆಪಿ ಮತ್ತೆ ತೆರೆಯುತ್ತದೆ ಮತ್ತು ಅಕ್ರಮದಲ್ಲಿ ತೊಡಗಿರುವ ಎಲ್ಲಾ ನಾಯಕರನ್ನು ಜೈಲಿಗೆ ಹಾಕಲಾಗುವುದು ಎಂದು ಮೋದಿ ವಾಗ್ದಾನ ಮಾಡಿದರು.

"ಎಲ್ಲಾ ನಿಜವಾದ ನಾಗರಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ನುಸುಳುಕೋರರು ಈ ದೇಶದಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಮೋದಿ ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ, ರಾಜ್ಯ ನೌಕರರು, ಶಿಕ್ಷಕರು ಮತ್ತು ಸಂಬಂಧಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ 7 ನೇ ವೇತನ ಆಯೋಗವನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

ದೇಶವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವಾಗ, ಟಿಎಂಸಿಯ 'ನಿರ್ಮಮ್ ಸರ್ಕಾರ' (ಕ್ರೂರ ಸರ್ಕಾರ) ಬಂಗಾಳವನ್ನು ಹಿಂದಕ್ಕೆ ಎಳೆಯುತ್ತಿದೆ. ವಿಕಸಿತ ಬಂಗಾಳಕ್ಕಾಗಿ ಪಕ್ಷವನ್ನು ಅಧಿಕಾರದಿಂದ ತೆಗೆದುಹಾಕುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಟಿಎಂಸಿ ಎರಡು ವಿಷಯಗಳಲ್ಲಿ ಬಂಗಾಳದ ಯುವಕರನ್ನು ವಂಚಿಸಿದೆ - ಖಾಸಗಿ ವಲಯವನ್ನು ನಾಶಪಡಿಸಿದ್ದು, ಹಣಕ್ಕಾಗಿ ಸರ್ಕಾರಿ ಹುದ್ದೆಗಳನ್ನು ಲೂಟಿ ಮಾಡಿದೆ ಎಂದು ಅವರು ಆರೋಪಿಸಿದರು.

ಟಿಎಂಸಿ ತನ್ನ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಧರ್ಮ ಆಧಾರಿತ ಮೀಸಲಾತಿ ನೀತಿಯನ್ನು ಅನುಸರಿಸುತ್ತಿದೆ. ಪ್ರತಿಕೂಲ ಹವಾಮಾನದ ಹೊರತಾಗಿಯೂ ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇರುವುದು ಬಂಗಾಳದಲ್ಲಿನ ಬದಲಾವಣೆಯ ಸೂಚಕವಾಗಿದೆ ಮತ್ತು ಟಿಎಂಸಿ ನಿರ್ಗಮನದ ಸಂಕೇತವಾಗಿದೆ" ಎಂದು ಪ್ರಧಾನಿ ಪ್ರತಿಪಾದಿಸಿದರು.

PM Modi
ಬಂಗಾಳ ಚುನಾವಣೆ: 144 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ; ಮತ್ತೆ ಮಮತಾ ವಿರುದ್ಧ ಸುವೇಂದು ಕಣಕ್ಕೆ

2021 ರ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ್‌ನಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅಧಿಕಾರಿಯ ಗೆಲುವನ್ನು ಉಲ್ಲೇಖಿಸಿದ ಮೋದಿ, ಐದು ವರ್ಷಗಳ ಹಿಂದೆ ನಂದಿಗ್ರಾಮ್‌ನಲ್ಲಿ ನಡೆದ ಚುನಾವಣಾ ಫಲಿತಾಂಶ ಈ ಬಾರಿ ಭಬಾನಿಪುರದಲ್ಲಿ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ದಕ್ಷಿಣ ಕೋಲ್ಕತ್ತಾದ ಭಬಾನಿಪುರದ ಅವರ ಭದ್ರಕೋಟೆಯಲ್ಲಿ ಸುವೇಂದು ಅಧಿಕಾರಿಯು ಹಾಲಿ ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com