ಕಾರ್ಪೊರೇಟ್ ಜಿಹಾದ್: ಗೋಮಾಂಸ ತಿನ್ನಲು ಯುವತಿಯರಿಗೆ ಒತ್ತಡ; HR ಸೇರಿ ಏಳು TCS ನೌಕರರ ವಜಾ

ಹೆಚ್ ಆರ್ ಸೇರಿ 7 ಮಂದಿ ವಿರುದ್ಧ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ಗೋಮಾಂಸ ತಿನ್ನುವಂತೆ ಒತ್ತಡ ಹೇರಿರುವ ಆರೋಪ ಕೇಳಿಬಂದಿದೆ.
TCS
ಟಿಸಿಎಸ್ online desk
Updated on

ಮುಂಬೈ: ಐಟಿ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್) ನಾಶಿಕ್ ಕಚೇರಿಯಲ್ಲಿ ಕಾರ್ಪೊರೇಟ್ ಜಿಹಾದ್ ಆರೋಪ ಕೇಳಿಬಂದಿದೆ.

ಹೆಚ್ ಆರ್ ಸೇರಿ 7 ಮಂದಿ ವಿರುದ್ಧ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿ ಗೋಮಾಂಸ ತಿನ್ನುವಂತೆ ಒತ್ತಡ ಹೇರಿರುವ ಆರೋಪ ಕೇಳಿಬಂದಿದ್ದು. ಆರೋಪ ಹೊತ್ತ ಎಲ್ಲಾ ನೌಕರರನ್ನು ಅಮಾನತುಗೊಳಿಸಲಾಗಿದೆ. ಇವರ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮುಂದುವರಿಯುತ್ತದೆ ಎಂದು ಟಿಸಿಎಸ್ ಕಂಪನಿ ತಿಳಿಸಿದೆ.

ಕಿರುಕುಳದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತೇವೆ ಮತ್ತು ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಟಿಸಿಎಸ್ ಸ್ಪಷ್ಟಪಡಿಸಿದೆ. ನಾಶಿಕ್‌ನ ಟಿಸಿಎಸ್ ಕಚೇರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕನನ್ನು ಒಳಗೊಂಡಂತೆ ಏಳು ಮಂದಿ ನೌಕರರನ್ನು, ಲೈಂಗಿಕ ಕಿರುಕುಳದ ಬೆಚ್ಚಿಬೀಳಿಸುವ ಆರೋಪಗಳ ಹಿನ್ನೆಲೆಯಲ್ಲಿ, ಪೊಲೀಸರು ಬಂಧಿಸಿದ್ದಾರೆ. ವಿವಾಹದ ಭರವಸೆ ನೀಡಿ ಸಂಬಂಧ ಆರಂಭಿಸಿ ನಂತರ ಮೋಸ ಮಾಡಿದ್ದರ ವಿರುದ್ಧ ಒಬ್ಬ ಮಹಿಳೆ ದೂರು ನೀಡಿದ್ದರು. ಈ ಬಳಿಕ ಹಲವು ಮಹಿಳೆಯರು ಮುಂದೆ ಬಂದು ದೂರು ದಾಖಲಿಸಿದ್ದರು. ಈ ಬಳಿಕ ಕಾರ್ಪೊರೇಟ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ.

ಈ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ ನಂತರ, ಇನ್ನೂ ಏಳು ಮಹಿಳೆಯರು ಮುಂದೆ ಬಂದು ತಮ್ಮ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಆರೋಪಿಗಳಲ್ಲಿ ಅಸಿಫ್ ಅಂಸಾರಿ, ಶಫಿ ಶೇಖ್, ಶಾಹ್ ರುಖ್ ಕುರೆಶಿ, ರಝಾ ಮೆಮೋನ್, ತೌಸಿಫ್ ಅತ್ತಾರ್ ಮತ್ತು ದಾನಿಶ್ ಶೇಖ್ ಸೇರಿದ್ದಾರೆ. ಆರೋಪಿತರ ವಿರುದ್ಧ ಕೆಲಸದ ಸ್ಥಳದಲ್ಲೇ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪವೂ ಕೇಳಿಬಂದಿದೆ. ಈ ಘಟನೆಗಳು ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

ದೂರುದಾರೆಯು ತನ್ನ ಮೇಲಿನ ಕಿರುಕುಳದ ಬಗ್ಗೆ ಮರುಮರು ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದ್ದರೂ, ಆ ಅಧಿಕಾರಿ ಕಿರುಕುಳಕ್ಕೆ ಸಹಕಾರ ನೀಡಿದರೆಂಬ ಆರೋಪ ಪೊಲೀಸ್‌ ಇಲಾಖೆಯಿಂದ ಕೇಳಿಬಂದಿದೆ.

TCS
TCS World 10K ಬೆಂಗಳೂರು ಓಟ: VIPಗಳಿಗಾಗಿ ರಾತ್ರೋರಾತ್ರಿ ದುರಸ್ತಿ ಮಾಡಬಹುದಾದರೆ ಸಾಮಾನ್ಯರಿಗಾಗಿ ಯಾಕಾಗಲ್ಲ; ರಸ್ತೆ ರಿಪೇರಿಗೆ ತೇಜಸ್ವಿ ಸೂರ್ಯ ಆಗ್ರಹ

ನಾಶಿಕ್ ಪೊಲೀಸ್‌ ಇಲಾಖೆ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ, ಏಳು ಮಹಿಳಾ ಪೊಲೀಸ್ ಅಧಿಕಾರಿಗಳು ವೇಷಧಾರಿಗಳಾಗಿ ಟಿಸಿಎಸ್ ನಾಶಿಕ್ ಕಚೇರಿಗೆ ಪ್ರವೇಶಿಸಿ, ಆರೋಪಿಗಳಲ್ಲಿ ಒಬ್ಬರನ್ನು ಬಯಲಿಗೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಆತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

ಈಗ ಪೊಲೀಸರು 40 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಎಲ್ಲ ಆರೋಪಿಗಳ ವಿರುದ್ಧ ದೃಢವಾದ ಪ್ರಕರಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಎಂಟು ಮಹಿಳೆಯರು ತಮ್ಮ ಸಹೋದ್ಯೋಗಿಗಳ ವಿರುದ್ಧ ಮಾಡಿರುವ ಆರೋಪಗಳಲ್ಲಿ, ಅಸಭ್ಯವಾಗಿ ಮುಟ್ಟುವುದು, ಅವರ ವೈಯಕ್ತಿಕ ಜೀವನದ ಬಗ್ಗೆ ಅಶ್ಲೀಲ ಹಾಗೂ ಅವಮಾನಕಾರಿ ಟಿಪ್ಪಣಿಗಳು ಮಾಡುವುದು, ದೇಹದ ಬಗ್ಗೆ ಹೀನಾಯವಾಗಿ ಮಾತನಾಡುವುದು, ಬಲವಂತವಾಗಿ ಮಾಂಸಾಹಾರಿ ಆಹಾರ ಸೇವಿಸಲು ಒತ್ತಾಯಿಸುವುದು ಮತ್ತು ಹಿಂಬಾಲಿಸುವುದು ಸೇರಿದಂತೆ ಹಲವು ಕಿರುಕುಳದ ಘಟನೆಗಳು ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com