ಕನ್ವರ್ ಯಾತ್ರೆಯ ವೇಳೆ ಮಹಿಳೆಯರು ಟ್ರಕ್ ಮೇಲೆ ನೃತ್ಯ ಮಾಡಿದ್ದು; ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ, Video!

ಉತ್ತರ ಭಾರತದ ಹಿಂದೂಗಳ ಪಾಲಿಗೆ ಪವಿತ್ರ ಯಾತ್ರೆಗಳಲ್ಲಿ ಕನ್ವರ್ ಯಾತ್ರೆಯೂ ಪ್ರಮುಖವಾಗಿದ್ದು ಶ್ರಾವಣ ಮಾಸದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಕನ್ವರ್ ಯಾತ್ರೆಯ ವೇಳೆ ಮಹಿಳೆಯರು ಟ್ರಕ್ ಮೇಲೆ ನೃತ್ಯ ಮಾಡಿದ್ದು; ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ, Video!
Updated on

ಉತ್ತರ ಭಾರತದ ಹಿಂದೂಗಳ ಪಾಲಿಗೆ ಪವಿತ್ರ ಯಾತ್ರೆಗಳಲ್ಲಿ ಕನ್ವರ್ ಯಾತ್ರೆಯೂ ಪ್ರಮುಖವಾಗಿದ್ದು ಶ್ರಾವಣ ಮಾಸದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಶಿವನ ಭಕ್ತರು ಗಂಗಾ ನದಿಯಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಅದನ್ನು ಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ತೆರಳಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಕೇಸರಿ ವಸ್ತ್ರ ಧರಿಸುವ ಭಕ್ತರನ್ನು 'ಕನ್ವರಿಯರು' ಎಂದು ಕರೆಯಲಾಗುತ್ತದೆ.

ಇಂತಹ ಪ್ರಮುಖ ಕನ್ವರ್ ಯಾತ್ರೆ ವೇಳೆ ಹಿಂದೂ ಸಂಪ್ರದಾಯಕ್ಕೆ ಧಕ್ಕೆ ತರುವಂತ ಕೃತ್ಯ ನಡೆದಿದೆ ಎಂದು ವರದಿಯಾಗಿದ್ದು. ಯುವತಿಯರು ಅರೆನಗ್ನವಾಸ್ಥೆಯಲ್ಲಿ ನಡು ರಸ್ತೆಯಲ್ಲಿ ಹೆಜ್ಜೆಹಾಕಿದ್ದು, ಇವರ ಜತೆಗೆ ಕೇಸರಿ ಬಣ್ಣದ ಧ್ವಜ ಹಿಡಿದ ಅನೇಕ ಯುವಕರು ಅಶ್ಲೀಲವಾಗಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂದು ವರದಿಯಾಗಿಲ್ಲ. ಆದರೆ ಇದು ಕನ್ವರ್ ಯಾತ್ರೆಯಲ್ಲಿ ನಡೆದ ಘಟನೆ ಅಂತ ಕೆಲವರು ವಿಡಿಯೋ ವೈರಲ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com