Union Budget 2026: ಮುನ್ಸಿಪಲ್ ಬಾಂಡ್ ವಿತರಣೆಗೆ 100 ಕೋಟಿ ರೂ. ಪ್ರೋತ್ಸಾಹ ಧನ ಘೋಷಣೆ

ಇಂದು ಲೋಕಸಭೆಯಲ್ಲಿ ದಾಖಲೆಯ 9ನೇ ಬಾರಿ ಬಜೆಟ್ ಮಂಡಿಸದ ನಿರ್ಮಲಾ ಅವರು, 'ವಿಕ್ಷಿತ್ ಭಾರತಕ್ಕಾಗಿ ಬ್ಯಾಂಕಿಂಗ್' ಕುರಿತು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವುದಾಗಿ ತಿಳಿಸಿದರು.
Union Finance Minister Nirmala Sitharaman presents Union Budget 2026-27
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು.Photo | Youtube Screengrab
Updated on

ನವದೆಹಲಿ: ಕೇಂದ್ರ ಹಣಕಾಸುವ ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾನುವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಪುರಸಭೆಗಳಿಂದ ರೂ. 1,000 ಕೋಟಿಗಿಂತ ಹೆಚ್ಚಿನ ಮೊತ್ತದ ಏಕ ಬಾಂಡ್ ವಿತರಣೆಗೆ 100 ಕೋಟಿ ರೂ. ಪ್ರೋತ್ಸಾಹ ಧನ ಘೋಷಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ದಾಖಲೆಯ 9ನೇ ಬಾರಿ ಬಜೆಟ್ ಮಂಡಿಸದ ನಿರ್ಮಲಾ ಅವರು, 'ವಿಕ್ಷಿತ್ ಭಾರತಕ್ಕಾಗಿ ಬ್ಯಾಂಕಿಂಗ್' ಕುರಿತು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವುದಾಗಿ ತಿಳಿಸಿದರು.

ದೇಶದ ಬ್ಯಾಂಕಿಂಗ್ ವಲಯವು ಬಲವಾದ ಬ್ಯಾಲೆನ್ಸ್ ಶೀಟ್, ಐತಿಹಾಸಿಕ ಹೆಚ್ಚಿನ ಲಾಭದಾಯಕತೆಯಿಂದ ನಿರೂಪಿಸಲ್ಪಟ್ಟಿದೆ ಎಂದು ಅವರು ಹೇಳಿದರು.

Union Finance Minister Nirmala Sitharaman presents Union Budget 2026-27
Union Budget 2026: ಸರ್ಕಾರದ ಮೂರು ಕರ್ತವ್ಯಗಳನ್ನು ಪಟ್ಟಿ ಮಾಡಿದ ನಿರ್ಮಲಾ

ತಮ್ಮ ಬಜೆಟ್ ಭಾಷಣದಲ್ಲಿ, ಸುಮಾರು 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ಅವರು ಹೇಳಿದರು.

ಮುನ್ಸಿಪಲ್ ಬಾಂಡ್ ಎಂದರೇನು?

ಪುರಸಭೆಗಳು ಹೂಡಿಕೆದಾರರಿಗೆ ವಿತರಿಸುವ ಬಾಂಡ್‌ಗಳನ್ನು ಸಾಲಗಳೆಂದು ಪರಿಗಣಿಸಬಹುದು ಮತ್ತು ಉದ್ಯಾನವನಗಳು, ಗ್ರಂಥಾಲಯಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಂತಹ ಸಾರ್ವಜನಿಕ ಕಾರ್ಯಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com