RSS ಬಗೆಗಿನ ತಪ್ಪು ಕಲ್ಪನೆ ನಿವಾರಿಸಲು ಕಾಶ್ಮೀರದಿಂದ- ಕನ್ಯಾಕುಮಾರಿವರೆಗೆ 'ಧ್ವಜ ಯಾತ್ರೆ'

ಆರ್‌ಎಸ್‌ಎಸ್‌ ಕೆಲ ಜನರ ವಿರುದ್ಧ ಇದೆ ಎಂಬ ತಪ್ಪು ಕಲ್ಪನೆಯನ್ನು ನಿವಾರಿಸುವುದೇ ಈ ಯಾತ್ರೆಯ ಉದ್ದೇಶ.
RSS Dwhajayatre
ಆರ್ ಎಸ್ ಎಸ್ ಧ್ವಜಯಾತ್ರೆ
Updated on

ಶ್ರೀನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕುರಿತಾಗಿ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಶುಕ್ರವಾರ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಆರ್ ಎಸ್ ಎಸ್ ಧ್ವಜ ಯಾತ್ರೆ ಆರಂಭವಾಗಿದೆ.

ಶ್ರೀನಗರದ ಐತಿಹಾಸಿಕ ಲಾಲ್‌ಚೌಕ್‌ನಿಂದ ಯಾತ್ರೆ ಆರಂಭವಾಗಿದ್ದು. ನೂರಾರು ಕಾರ್ಯಕರ್ತರು ದೇಶದ ವಿವಿಧ ಭಾಗಗಳತ್ತ ವಾಹನಗಳ ಮೂಲಕ ತೆರಳಿದರು. ಆರ್‌ಎಸ್‌ಎಸ್‌ ಕೆಲ ಜನರ ವಿರುದ್ಧ ಇದೆ ಎಂಬ ತಪ್ಪು ಕಲ್ಪನೆಯನ್ನು ನಿವಾರಿಸುವುದೇ ಈ ಯಾತ್ರೆಯ ಉದ್ದೇಶ. ಈ ಮೂಲಕ ನಾವು ಜನರಿಗೆ ಸರಿಯಾದ ಸಂದೇಶ ರವಾನಿಸುವುದಾಗಿದೆ ಎಂದು ಆರ್‌ಎಸ್‌ಎಸ್‌ನ ವೀರ ಕಪೂರ್‌ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಪ್ರಾರಂಭವಾಗಿ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘಟನೆ ಮಾಡಿದ ಕಾರ್ಯಗಳನ್ನು ಪ್ರತಿಬಿಂಬಿಸುವ ಶತಕ್‌ ಎಂಬ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು. ಆ ಚಿತ್ರ ಫೆಬ್ರವರಿ 19ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com