Rahul Gandhi
ರಾಹುಲ್ ಗಾಂಧಿ

ವಿರೋಧ ಪಕ್ಷದ ನಾಯಕನಾಗಲು ರಾಹುಲ್ ಗಾಂಧಿ ನಾಲಾಯಕ್: ಶ್ರೀಕಾಂತ್ ಶಿಂಧೆ

ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತಿರುವ ರೀತಿಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಎಐ ಶೃಂಗಸಭೆ ಆಯೋಜಿಸಲಾಗಿದೆ, ಆದರೆ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರವನ್ನು ಮುಜುಗರಕ್ಕೀಡು ಮಾಡುವ ನಾಟಕೀಯ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ.
Published on

ನವದೆಹಲಿ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆಗಳ ಕುರಿತು ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು,

ರಾಹುಲ್ ಗಾಂಧಿ ತಮ್ಮದೇ ಆದ ಪಕ್ಷವನ್ನು ನಡೆಸಲು ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಲು ಅನರ್ಹರಾಗಿದ್ದಾರೆ ಎಂದು ಹೇಳಿದರು. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿಂಧೆ, ಪ್ರಧಾನಿ ನರೇಂದ್ರ ಮೋದಿ ಅವರು ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿ ಕೇಂದ್ರವಾಗಿ ಭಾರತವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಬಟ್ಟೆ ಮನುಷ್ಯನನ್ನು ಮಾಡುತ್ತದೆ. ಬೆತ್ತಲೆ ಜನರು ಸಮಾಜದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಶಿಂಧೆ ಹೇಳಿದರು.

ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತಿರುವ ರೀತಿಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಎಐ ಶೃಂಗಸಭೆ ಆಯೋಜಿಸಲಾಗಿದೆ, ಆದರೆ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರವನ್ನು ಮುಜುಗರಕ್ಕೀಡು ಮಾಡುವ ನಾಟಕೀಯ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ ಎಂದು ಶಿಂಧೆ ಹೇಳಿದರು.

Rahul Gandhi
ರಾಹುಲ್ ಗಾಂಧಿ, 25 ಸಂಸದರಿಗೆ ಕೊಲೆ ಬೆದರಿಕೆ: BJP-RSS 'ಗೋಡ್ಸೆ ಕಾರ್ಖಾನೆ' - ಕಾಂಗ್ರೆಸ್ ಕಿಡಿ

ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎಐ ಶೃಂಗಸಭೆ ಸಭಾಂಗಣದಲ್ಲಿ ನಾಟಕೀಯವಾಗಿ "ಶರ್ಟ್‌ಲೆಸ್ ಪ್ರತಿಭಟನೆ" ನಡೆಸಿತು, ಸರ್ಕಾರ ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆಗಳನ್ನು ಹೊಂದಿರುವ ಟೀ-ಶರ್ಟ್‌ಗಳನ್ನು ಹಿಡಿದುಕೊಂಡು ತಿರುಗಾಡಿದರು.

"ಭಾರತದ ಪ್ರಮುಖ ವಿರೋಧ ಪಕ್ಷವು ಬುದ್ಧಿವಂತಿಕೆ ಮತ್ತು ಸಮಗ್ರತೆಯನ್ನು ಧರಿಸುತ್ತದೆ - ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಮೇಲಿನ ಪ್ರೀತಿಯನ್ನು ಧರಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಶಿಂಧೆ ಹೇಳಿದರು.

ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಬಲಗೊಳ್ಳುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ವಿರೋಧ ಪಕ್ಷಗಳು ವಿಚಾರಗಳ ಬದಲಿಗೆ ಬರಿ ಶಬ್ಗ ಮಾಡುತ್ತಿವೆ. ಪ್ರಜಾಪ್ರಭುತ್ವಕ್ಕೆ ಗಂಭೀರ ವಿರೋಧದ ಅಗತ್ಯವಿದೆ - ಆದರೆ ನಾವು ನೋಡುತ್ತಿರುವುದು ವಿಶ್ವಾಸಾರ್ಹತೆಯ ಕುಸಿತ" ಎಂದು ಶಿವಸೇನಾ ನಾಯಕ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com