

ಹೈದರಾಬಾದ್: ತೆಲಂಗಾಣ ವಿಧಾನಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು CPI ಶಾಸಕ ಕುನಮ್ನೇನಿ ಸಾಂಬಶಿವ ರಾವ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕರು ಕೆರಳಿದ್ದಾರೆ.
ಹೌದು. ಯುಪಿಎ ಅವಧಿಯ 'ಮನ್ರೇಗಾ' ಹೆಸರು ಬದಲಾಗಿರುವ 'ವಿಬಿ-ಜಿ ರಾಮ್ ಜಿ' ಕಾಯ್ದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
MGNREGA ಹೆಸರು ಬದಲಾಯಿಸಿ, ಹೊಸ ಗ್ರಾಮೀಣ ಉದ್ಯೋಗ ಕಾನೂನಿನ ಶೀರ್ಷಿಕೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿದ್ದಕ್ಕಾಗಿ ಬಿಜೆಪಿ ಮತ್ತು ಕೇಂದ್ರದ NDA ಸರ್ಕಾರದ ವಿರುದ್ಧ ರಾವ್ ವಾಗ್ದಾಳಿ ನಡೆಸಿದರು. ಅವರ ಹೇಳಿಕೆಗಳು ಸದನದಲ್ಲಿ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ನಂತರ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ , ಯಾವುದೇ ಆಕ್ಷೇಪಾರ್ಹ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದರು. ಚರ್ಚೆಯ ನಂತರ ಮನ್ರೇಗಾ ಹೆಸರನ್ನು VB-G RAM G ಕಾಯ್ದೆಗೆ ಬದಲಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿತು ಮತ್ತು ಯುಪಿಎ ಕಾಲದ ಕಾನೂನನ್ನು ಮುಂದುವರಿಸಬೇಕೆಂದು ಒತ್ತಾಯಿಸಿತು.
ಸಿಪಿಐ ಶಾಸಕ ಕುಣಂನೇನಿ ಸಾಂಬಶಿವ ರಾವ್ ಅವರು ಪ್ರಧಾನಿ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ರಾಜ್ಯ ಸಚಿವ (ಗೃಹ) ಬಂಡಿ ಸಂಜಯ್ ಕುಮಾರ್, "ಕಮ್ಯುನಿಸಂ ದೇಶಾದ್ಯಂತ ನೆಲೆ ಕಳೆದುಕೊಂಡಿದ್ದು "ಮೋದಿಜಿಯವರ ನಾಯಕತ್ವದಲ್ಲಿ ಭಾರತವು ಪ್ರಗತಿ ಸಾಧಿಸಿದೆ. ಆದರೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರಾಜಕೀಯವು ನಿಂದನೆ ಮತ್ತು ಅಪ್ರಸ್ತುತತೆಗೆ ಸಿಲುಕಿದ್ದು, ಸ್ಪಷ್ಟವಾಗಿಲ್ಲ. ಈ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಒತ್ತಾಯಿಸಿದ್ದಾರೆ.
Advertisement