

ನವದೆಹಲಿ: ಮುಂಬರುವ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರಿಶೀಲನಾ ಸಮಿತಿ ರಚಿಸಿದೆ. ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಗೆ ಚುನಾವಣೆ ನಡೆಯಲಿದ್ದು, ಕರ್ನಾಟಕದ ಮೂವರಿಗೆ ಸಮಿತಿಯಲ್ಲಿ ಅವಕಾಶ ನೀಡಲಾಗಿದೆ.
ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಪಶ್ಚಿಮ ಬಂಗಾಳದ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಸಂಸದರಾದ ಜಿ.ಸಿ. ಚಂದ್ರಶೇಖರ್ ಮತ್ತು ನಾಸಿರ್ ಹುಸೇನ್ ಅವರು ಕ್ರಮವಾಗಿ ಕೇರಳ ಹಾಗೂ ತಮಿಳುನಾಡು, ಪುದುಚೇರಿ ಸಮಿತಿಯ ಸದಸ್ಯರಾಗಿದ್ದಾರೆ.
ಮಧುಸೂದನ್ ಮಿಸ್ತ್ರಿ ಕೇರಳ ಕಾಂಗ್ರೆಸ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದು, ಡಾ. ಸಯ್ಯದ್ ನಾಸೀರ್ ಹುಸೇನ್, ನೀರಾಜ್ ಡಂಗಿ, ಅಭಿಷೇಖ್ ದತ್ ಸದಸ್ಯರಾಗಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂ ಕಾಂಗ್ರೆಸ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದು, ಸಪ್ತಗಿರಿ ಶಂಕರ್ ಉಳಾಕ, ಇಮ್ರಾನ್ ಮಸೂದ್, ಡಾ. ಸಿರಿವೆಲ್ಲಾ ಪ್ರಸಾದ್ ಸದಸ್ಯರಾಗಿದ್ದಾರೆ.
ಟಿಎಸ್ ಸಿಂಗ್ ಡಿಯೋ ತಮಿಳುನಾಡು ಮತ್ತು ಪುದುಚೇರಿ ಕಾಂಗ್ರೆಸ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದು, ಯಶೋಮತಿ ಠಾಕೂರ್, ಜಿ.ಸಿ. ಚಂದ್ರಶೇಖರ್, ಅನಿಲ್ ಕುಮಾರ್ ಯಾದವ್ ಸದಸ್ಯರಾಗಿದ್ದಾರೆ. ಬಿಕೆ ಹರಿಪ್ರಸಾದ್ ಕೇರಳ ಕಾಂಗ್ರೆಸ್ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದು, ಡಾ. ಮೊಹಮ್ಮದ್ ಜಾವೇದ್, ಮಮತಾ ದೇವಿ ಮತ್ತು ಬಿ.ಪಿ. ಸಿಂಗ್ ಸದಸ್ಯರಾಗಿದ್ದಾರೆ.
Advertisement