

ಲಖನೌ: ಉತ್ತರ ಪ್ರದೇಶದ ಲಖನೌನ ವೃಂದಾವನದಲ್ಲಿ ಪ್ರಾರಂಭವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಏಳು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸಭೆಯ ಮೊದಲ ದಿನ ‘ಲವ್ ಜಿಹಾದ್’ ಅಕ್ರಮ ವಲಸೆ ಮತ್ತು ಹಿಂದೂಗಳ ಒಗ್ಗೂಡಿಸುವಿಕೆ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಹಿರಿಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದು, ಹಿಂದೂಗಳನ್ನು ಸಂಪರ್ಕಿಸಿ, ಅವರಿಗೆ ಏಕತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು. ಹಿಂದೂ ಸಮಾಜದಲ್ಲಿ ಲವ್ ಜಿಹಾದ್ ಮತ್ತು ವಿಭಜನೆ ಬಗ್ಗೆ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಹಿಂದೂ ಕುಟುಂಬವನ್ನು ಸಂಪರ್ಕಿಸಬೇಕು. ಹಿಂದೂಗಳು ಒಗ್ಗಟ್ಟಾಗಿರಲು ಮನವೊಲಿಸಬೇಕು ಎಂದು ಸಂಘದ ಪದಾಧಿಕಾರಿಗಳಿಗೆ ಹೇಳಿರುವುದಾಗಿ ಮೂಲಗಳು ಹೇಳಿವೆ.
ಹಿಂದೂಗಳ ಒಗ್ಗಟ್ಟಾಗಿ ಇದ್ದಾಗ ಮಾತ್ರ ಭಾರತ ಬಲಿಷ್ಠವಾಗಲು ಸಾಧ್ಯ. ಸ್ವಯಂಸೇವಕರು ಈ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಲವ್ ಜಿಹಾದ್' ವಿರುದ್ಧ ನಾವು ಕಾವಲುಗಾರರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕಿರುಕುಳ ಮತ್ತು ಅಕ್ರಮ ವಲಸೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಜನವರಿ ಹತ್ತರಿಂದ ನಭಪೀಠ ಸುದಾಮ ಕುಟಿಯ ಶತಮಾನೋತ್ಸವಕ್ಕೆ ಭಾಗವತ್ ಚಾಲನೆ ನೀಡಲಿದ್ದಾರೆ.
Advertisement