

ಚಂಡೀಗಢ: ಪಾಕಿಸ್ತಾನಿ ಹ್ಯಾಂಡ್ಲರ್ ಗಳಿಗೆ ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆತನನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮತಾಂಧನಾಗಿ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು, ISI ಮತ್ತು ಆ ದೇಶದಲ್ಲಿ ಉಗ್ರಗಾಮಿ ಘಟಕ ನಡೆಸುತ್ತಿರುವ ಸಂಘಟನೆಗಳ ಜೊತೆಗೆ ಸಂಪರ್ಕದಲ್ಲಿದ್ದ ಬಾಲಕ, ದೇಶದ ಭದ್ರತೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂಬ ಮಾಹಿತಿ ಲಭಿಸಿತ್ತು.
ಈ ಮಾಹಿತಿ ಆಧಾರದ ಮೇಲೆ ಸೋಮವಾರ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು ಎಂದು ಪಠಾಣ್‌ಕೋಟ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದಲ್ಜಿಂದರ್ ಸಿಂಗ್ ಧಿಲ್ಲೋನ್ ತಿಳಿಸಿದ್ದಾರೆ.
ಬಾಲಕನಿಗೆ ತಂದೆ ಇಲ್ಲ. ಒಂದು ವರ್ಷದ ಹಿಂದಿನಿಂದ ಆತ ಜಮ್ಮು ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಅವರು ಕೊಲೆಯಾಗಿರುವ ಸಾಧ್ಯತೆಯಿದೆ. ಪೊಲೀಸ್ ತನಿಖೆಯಲ್ಲಿ ಬಾಲಕನ ತಂದೆ ಕೊಲೆ ತಿಳಿದುಬಂದಿಲ್ಲ.
ಆದರೆ ಅದು ಬಾಲಕನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು ಅನೇಕ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಸಂಪರ್ಕಿಸಿದ್ದ. ಈ ವೇಳೆ ಪಾಕಿಸ್ತಾನ ಏಜೆನ್ಸಿಗಳಿಗೆ ಸಿಕ್ಕಿದ್ದು, ಒಂದು ವರ್ಷದಿಂದ ಅವರ ಸಂಪರ್ಕದಲ್ಲಿದ್ದ. ಪಾಕಿಸ್ತಾನದ ಏಜೆಂಟರು ಬಾಲಕನ ಮೊಬೈಲ್ ಫೋನ್‌ನ ಕ್ಲೋನ್ ಅನ್ನು ರಚಿಸಿದ್ದರು ಎಂದು ಧಿಲ್ಲೋನ್ ಹೇಳಿದರು.
ಬಾಲಕ ತಂತ್ರಜ್ಞಾನದಲ್ಲಿ ಪರಿಣತಿ ಪಡೆದಿದ್ದ .ಪಾಕಿಸ್ತಾನಿ ಏಜೆನ್ಸಿಗಳು ಮತ್ತು ಹ್ಯಾಂಡ್ಲರ್‌ಗಳು ಆತನ ಮೊಬೈಲ್ ಫೋನ್‌ನಿಂದ ಕ್ಲೋನಿಂಗ್ ಮೂಲಕ ಮಾಹಿತಿ ಪಡೆಯುತ್ತಿದ್ದರು.
ಬಾಲಕ ಪ್ರಮುಖ ಸ್ಥಳಗಳ ವೀಡಿಯೋಗ್ರಫಿ ಮಾಡಿ ಮಾಹಿತಿ ಮಾಹಿತಿ ಸಂಗ್ರಹಿಸಿದ್ದ. ಬಹುಶಃ ಅವರ ಫೋನ್ ಹ್ಯಾಕ್ ಆಗಿದ್ದರೆ, ಮಾಹಿತಿಯು ಲೈವ್ ಆಗಿರುತಿತ್ತು. ಆತ ಭಯೋತ್ಪಾದನಾ ಘಟಕ ನಡೆಸುತ್ತಿರುವ ಗ್ಯಾಂಗ್ ಸ್ಟರ್ ಗಳೊಂದಿಗೆ ಸಂಪರ್ಕದಲ್ಲಿದ್ದ. ಆತನನ್ನು ಒಂದು ವೇಳೆ ಬಂಧಿಸದಿದ್ದರೆ, ಭವಿಷ್ಯದಲ್ಲಿ ಆತ ಯಾವುದೇ ರೀತಿಯ ಉಗ್ರ ಚಟುವಟಿಕೆ ನಡೆಸುವ ಸಾಧ್ಯತೆ ಹೆಚ್ಚಾಗಿತ್ತು ಎಂದು SSP ಹೇಳಿದರು.
Advertisement