

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಂದು ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಆಪರೇಷನ್ ಸಿಂಧೂರ್ ಬಗ್ಗೆ ಅಲ್ಲ, ಬದಲಿಗೆ ರಷ್ಯಾದ ತೈಲವನ್ನು ಭಾರತ ಖರೀದಿಸಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಗುಡುಗಿದ್ದಾರೆ. ಕಳೆದ ವರ್ಷ ಅಮೆರಿಕವು ಭಾರತದ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸಿದ ನಂತರ ಭಾರತವು ರಷ್ಯಾದ ತೈಲದ ಆಮದನ್ನು ಕಡಿಮೆ ಮಾಡಲು ಇಚ್ಛೆಯನ್ನು ತೋರಿಸಿದೆ ಎಂದು ಟ್ರಂಪ್ ಹೇಳಿದ್ದರು. ಆಡಿಯೋ ಕ್ಲಿಪ್‌ನಲ್ಲಿಈ ಹೇಳಿಕೆ ಕೇಳಿಬಂದಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
ಮೋದಿ ಅವರು ನನ್ನನ್ನು ಸಂತೋಷಪಡಿಸಲು ಬಯಸಿದ್ದರು" ಎಂದು ಟ್ರಂಪ್ ಆಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ಉಲ್ಲೇಖಿಸಿ, ಪ್ರಧಾನಿ ಮೋದಿಯವರ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಟ್ರಂಪ್ ಮುಂದೆ ಮೋದಿ ಯಾಕೆ ತಲೆಬಾಗುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ರಾಷ್ಟ್ರಕ್ಕೆ ಹಾನಿಕಾರಕವಾಗಿದೆ. ಅವರು ದೇಶಕ್ಕಾಗಿ ನಿಲ್ಲಬೇಕು. ಟ್ರಂಪ್ ಏನೇ ಹೇಳಿದರೂ ಮೋದಿ ತಲೆಬಾಗುತ್ತಾರೆ. ದೇಶವು ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದು, ಇದು ದೇಶಕ್ಕೆ ಹಾನಿಕಾರಕವಾಗಿದೆ ಎಂದಿದ್ದಾರೆ.
"ಮೋದಿ ಅವರನ್ನು ಗೌರವಿಸುತ್ತಾರೆ ಮತ್ತು ಅವರ ಮಾತನ್ನು ಕೇಳುತ್ತಾರೆ ಎಂದು ಟ್ರಂಟ್ ಹೇಳುವ ಆಡಿಯೋವನ್ನು ನಾನು ಕೇಳಿದ್ದೇನೆ. ಇದರ ಅರ್ಥವೇನು? ಇದರರ್ಥ ಮೋದಿ ಅವರ ನಿಯಂತ್ರಣದಲ್ಲಿದ್ದಾರೆ ಎಂದರ್ಥ ಎಂದು ಹೇಳಿದರು.
ನನಗೆ ಮಿಸ್ಟರ್ ಇಂಡಿಯಾ - 'ಮೊಗಾಂಬೋ ಖುಷ್ ಹುವಾ' ಎಂಬ ಡೈಲಾಗ್ ನೆನಪಿದೆ. ರಾಯಭಾರಿ ಅವರೊಂದಿಗೆ ಮಾತನಾಡಿದ ನಂತರ, ಟ್ರಂಪ್ 'ಮೊಗಾಂಬೋ ಖುಷ್ ಹುವಾ' ಎಂದು ಹೇಳಿದ್ದರು. ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರ ಇತ್ತೀಚಿನ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಖರ್ಗೆ, ಇದು ವಸಾಹತುಶಾಯಿ ಪ್ರವೃತ್ತಿಗಳು ಮತ್ತು ರಾಷ್ಟ್ರಗಳನ್ನು ಬೆದರಿಸುವ ಪ್ರಯತ್ನ ಎಂದರು.
Advertisement