ಮೋದಿ-ಶಾಗೆ ಸಮಾಧಿ ತೊಡುತ್ತೇವೆ: ಉಮರ್-ಶಾರ್ಜೀಲ್‌ಗೆ ಜಾಮೀನು ನಿರಾಕರಣೆ ಬೆನ್ನಲ್ಲೇ JNUನಲ್ಲಿ ಘೋಷಣೆ, Video!

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆಗಳು ಮತ್ತು ಆಕ್ಷೇಪಾರ್ಹ ಘೋಷಣೆಗಳಿಗೆ ಸಾಕ್ಷಿಯಾಗಿದೆ.
ಮೋದಿ-ಶಾ
ಮೋದಿ-ಶಾ
Updated on

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆಗಳು ಮತ್ತು ಆಕ್ಷೇಪಾರ್ಹ ಘೋಷಣೆಗಳಿಗೆ ಸಾಕ್ಷಿಯಾಗಿದೆ. ದೆಹಲಿ ಗಲಭೆಯ ಆರೋಪಿ ಉಮರ್ ಖಾಲಿದ್ ಮತ್ತು ದೇಶದ್ರೋಹದ ಆರೋಪ ಹೊತ್ತಿರುವ ಶಾರ್ಜೀಲ್ ಇಮಾಮ್ ನನ್ನು ಬೆಂಬಲಿಸಿ ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗಿದ್ದಾರೆ. ವರದಿಗಳ ಪ್ರಕಾರ, ವಿದ್ಯಾರ್ಥಿಗಳು ಮೋದಿ-ಶಾಗೆ ಸಮಾಧಿ ತೊಡುತ್ತೇವೆ ಎಂಬ ಘೋಷಣೆಗಳನ್ನು ಕೂಗಿದ್ದು ವಿವಾದಕ್ಕೆ ಕಾರಣವಾಯಿತು. ದೇಶದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೆಎನ್‌ಯು ಕಳೆದ ಕೆಲವು ವರ್ಷಗಳಿಂದ ವಿವಾದದಲ್ಲಿ ಸಿಲುಕಿಕೊಂಡಿದೆ.

ಸಬರಮತಿ ಹಾಸ್ಟೆಲ್ ಹೊರಗೆ ರಾತ್ರಿಯಿಡೀ ವಿವಾದಾತ್ಮಕ ಘೋಷಣೆಗಳು ಮತ್ತು ಪ್ರತಿಭಟನೆಗಳು ನಡೆದವು. ಪ್ರತಿಭಟನೆಯ ಸಮಯದಲ್ಲಿ, ಎಡಪಂಥೀಯ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗಿದರು. ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು. ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರನ್ನು ಬೆಂಬಲಿಸಿ ಈ ಘೋಷಣೆಗಳನ್ನು ಕೂಗಲಾಯಿತು. ಚಿಕನ್ ನೆಕ್ ಕತ್ತರಿಸಿ ಈಶಾನ್ಯವನ್ನು ಭಾರತದಿಂದ ಬೇರ್ಪಡಿಸಬೇಕೆಂದು ಹೇಳಿಕೆ ನೀಡಿದ್ದಕ್ಕಾಗಿ ಶಾರ್ಜೀಲ್ ಇಮಾಮ್ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದರೇ ಉಮರ್ ಖಾಲಿದ್ ದೆಹಲಿ ಗಲಭೆ ಆರೋಪ ಎದುರಿಸುತ್ತಿದ್ದಾನೆ.

ಜೆಎನ್‌ಯುನಲ್ಲಿ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಸಚಿವ ಕಪಿಲ್ ಮಿಶ್ರಾ, ಹೆಡೆ ಎತ್ತಿದ ಹಾವುಗಳ ತಲೆ ಮೇಲೆ ಹೊಡೆದಾಗ ನೋವಿನಿಂದ ನರಳುತ್ತಿವೆ. ಜೆಎನ್‌ಯುನಲ್ಲಿ ನಕ್ಸಲೀಯರು, ಭಯೋತ್ಪಾದಕರು ಮತ್ತು ಗಲಭೆಕೋರರನ್ನು ಬೆಂಬಲಿಸಿ ಅಸಭ್ಯ ಘೋಷಣೆಗಳನ್ನು ಕೂಗಿದವರು, ನಕ್ಸಲೀಯರನ್ನು ನಿರ್ಮೂಲನೆ ಮಾಡಲಾಗುತ್ತಿದೆ. ಭಯೋತ್ಪಾದಕರನ್ನು ನಿಭಾಯಿಸಲಾಗುತ್ತಿದೆ. ಗಲಭೆಕೋರರನ್ನು ನ್ಯಾಯಾಲಯ ಗುರುತಿಸಿದೆ ಎಂಬ ಕಾರಣದಿಂದಾಗಿ ಹತಾಶರಾಗಿದ್ದಾರೆ ಎಂದು ಹೇಳಿದರು.

ಮೋದಿ-ಶಾ
ಪಾಕ್-ಚೀನಾಗೆ ಶಾಕ್! ಭಾರತೀಯ ಸೇನೆ ಕೈ ಸೇರಲಿದೆ ಸ್ವದೇಶಿ ನಿರ್ಮಿತ 'ರಾಮಾಸ್ತ್ರ'; ಜಗತ್ತಿನಲ್ಲೇ ಮೊದಲು!

ಜೆಎನ್‌ಯುನಲ್ಲಿ ಕೇಳಿಬಂದ ಘೋಷಣೆಗಳ ಬಗ್ಗೆ ದೆಹಲಿ ಪೊಲೀಸರು ಏನು ಹೇಳಿದರು?

ಜೆಎನ್‌ಯುನಲ್ಲಿ ಕೇಳಿಬಂದ ಘೋಷಣೆಗಳ ಬಗ್ಗೆ ತಮಗೆ ತಿಳಿದಿದೆ. ಆದರೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ದೆಹಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋರಿದ್ದಾರೆ. ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ಜೆಎನ್‌ಯು ಘಟಕದ ಎಬಿವಿಪಿ ಉಪಾಧ್ಯಕ್ಷ ಮನೀಶ್ ಚೌಧರಿ, "ಶಾರ್ಜಿಲ್ ಇಮಾಮ್ ಮತ್ತು ಉಮರ್ ಖಾಲಿದ್‌ಗೆ ಜಾಮೀನು ನಿರಾಕರಿಸಿದ ನಂತರ ಪ್ರಧಾನಿ ವಿರುದ್ಧ ಕೇಳಿಬಂದ ಘೋಷಣೆಗಳು ಸರಿಯಲ್ಲ. ದೆಹಲಿ ಗಲಭೆಯಲ್ಲಿ ಭಾಗಿಯಾಗಿರುವವರನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಜೆಎನ್‌ಯುಎಸ್‌ಯು ಸಬರಮತಿ ಹಾಸ್ಟೆಲ್ ಬಳಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮೂಲಗಳ ಪ್ರಕಾರ, ವಿವಾದಾತ್ಮಕ ಘೋಷಣೆಗಳನ್ನು ಕೂಗಿದಾಗ ಜೆಎನ್‌ಯು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ ಮತ್ತು ಕಾರ್ಯದರ್ಶಿ ಸುನಿಲ್ ಸ್ಥಳದಲ್ಲಿದ್ದರು. ಹೆಚ್ಚುವರಿಯಾಗಿ, ಎಡಪಂಥೀಯ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಹಲವಾರು ವಿದ್ಯಾರ್ಥಿಗಳು ಸಹ ಅಲ್ಲಿ ಜಮಾಯಿಸಿದ್ದರು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com