

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧ ಮತ್ತು ಸುಂಕಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಮಾಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1971 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಮೆರಿಕದ ಒತ್ತಡವನ್ನು ಹೇಗೆ ತಡೆದರು ಎಂಬುದರ ಕುರಿತು ತಾವು ಮಾತನಾಡಿದ್ದ ಹಳೆಯ ವೀಡಿಯೊವನ್ನು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ರಷ್ಯಾದ ತೈಲ ಖರೀದಿಗಾಗಿ ದೆಹಲಿಯ ಮೇಲೆ ವಾಷಿಂಗ್ಟನ್ ವಿಧಿಸಿದ ಸುಂಕಗಳಿಂದಾಗಿ ಪ್ರಧಾನಿ ಮೋದಿ "ನನ್ನ ಬಗ್ಗೆ ಅಷ್ಟೊಂದು ಸಂತೋಷವಾಗಿಲ್ಲ" ಎಂದು ಟ್ರಂಪ್ ಮಂಗಳವಾರ ಹೇಳಿದ್ದಾರೆ. ಈ ಬೆನ್ನಲ್ಲೇ ರಾಹುಲ್ ಗಾಂಧಿ ಹೇಳಿಕೆಗಳು ಬಂದಿವೆ.
ಹೌಸ್ GOP ಸದಸ್ಯ ರಿಟ್ರೀಟ್‌ನಲ್ಲಿ ಹೇಳಿಕೆಗಳನ್ನು ನೀಡಿದ ಟ್ರಂಪ್, ಪ್ರಧಾನಿ ಮೋದಿ ನನ್ನನ್ನು ನೋಡಲು ಬಂದರು, "ಸರ್, ದಯವಿಟ್ಟು ನಾನು ನಿಮ್ಮನ್ನು ಭೇಟಿ ಮಾಡಬಹುದೇ' ಎಂದು ಹೇಳಿಕೊಂಡರು." ಎಂಬುದಾಗಿ ಹೇಳಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ, ಸರ್ ಜಿ!" ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ತಮ್ಮ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕರೆಯ ನಂತರ ಪ್ರಧಾನಿ ಮೋದಿ "ಶರಣಾಗತರಾದರು" ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
1971 ರ ಯುದ್ಧದಲ್ಲಿ ಅಮೆರಿಕ ತನ್ನ ಏಳನೇ ನೌಕಾಪಡೆಯನ್ನು ಕಳುಹಿಸಿದರೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಂದೆ ಸರಿಯಲಿಲ್ಲ, "ಇದು ವ್ಯತ್ಯಾಸ" ಎಂದು ರಾಹುಲ್ ಗಾಂಧಿ ಹೇಳಿದ್ದರು.
ಟ್ರಂಪ್ ಅವರ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪರ್ಕ ಉಸ್ತುವಾರಿ ಜೈರಾಮ್ ರಮೇಶ್ ಕೂಡ ಪ್ರಧಾನಿಯನ್ನು ಟೀಕಿಸಿದ್ದಾರೆ. "ನಮಸ್ತೆ ಟ್ರಂಪ್ ನಿಂದ ಹೌಡಿ ಮೋದಿ ವರೆಗೆ ಡೊನಾಲ್ಡ್ ಭಾಯ್ ವರೆಗೆ, ಈಗ ಇದು. ಮುಂದೇನು?" ಎಂದು ರಮೇಶ್ X ನಲ್ಲಿ ಪ್ರಶ್ನಿಸಿದ್ದಾರೆ.
ಟ್ರಂಪ್ ರಷ್ಯಾದ ತೈಲ ಖರೀದಿಗೆ ಶೇಕಡಾ 25 ರಷ್ಟು ಸೇರಿದಂತೆ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ ಐದು ವರ್ಷಗಳಿಂದ ಕಾಯುತ್ತಿರುವುದಾಗಿ ಭಾರತ ನನಗೆ ತಿಳಿಸಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
Advertisement