Small Aircraft Crashes Near Rourkela,
ಸಣ್ಣ ವಿಮಾನ ಪತನ

ಒಡಿಶಾದ ರೂರ್ಕೆಲಾ ಬಳಿ ಸಣ್ಣ ವಿಮಾನ ಪತನ; ಪೈಲಟ್ ಸೇರಿ ಆರು ಜನರಿಗೆ ಗಂಭೀರ ಗಾಯ

ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಸೇರಿದಂತೆ ಏಳು ಜನ ಇದ್ದರು. ರೂರ್ಕೆಲಾದಿಂದ ಸುಮಾರು 10–15 ಕಿಲೋಮೀಟರ್ ದೂರದಲ್ಲಿ ಈ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ.
Published on

ರೂರ್ಕೆಲಾ: ಒಡಿಶಾದ ರೂರ್ಕೆಲಾದಿಂದ ಭುವನೇಶ್ವರಕ್ಕೆ ಹಾರುತ್ತಿದ್ದ ಇಂಡಿಯಾ ಒನ್ ಏರ್ ವಿಮಾನದ ಒಂಬತ್ತು ಆಸನಗಳ ಸಣ್ಣ ವಿಮಾನ ಶನಿವಾರ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಸೇರಿದಂತೆ ಏಳು ಜನ ಇದ್ದರು. ರೂರ್ಕೆಲಾದಿಂದ ಸುಮಾರು 10–15 ಕಿಲೋಮೀಟರ್ ದೂರದಲ್ಲಿ ಈ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಪೈಲಟ್ ಸೇರಿದಂತೆ ಆರು ಜನರಿಗೆ ಗಂಭೀರ ಗಾಯಳಾಗಿವೆ. ರಕ್ಷಣಾ ತಂಡ, ಅಪಘಾತದ ಸ್ಥಳಕ್ಕೆ ತಲುಪಿ ಗಾಯಗೊಂಡ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

Small Aircraft Crashes Near Rourkela,
ದುಬೈ ಏರ್ ಶೋ ವೇಳೆ ದುರಂತ: ಭಾರತದ ತೇಜಸ್ ಯುದ್ಧ ವಿಮಾನ ಪತನ, ಪೈಲಟ್ ಸಾವು! ತನಿಖೆಗೆ IAF ಆದೇಶ

ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಬೆಂಬಲದೊಂದಿಗೆ ಮೂರು ಅಗ್ನಿಶಾಮಕ ದಳದ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು.

ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com