

Indian Idol 3 ವಿಜೇತ, ಗಾಯಕ-ನಟ ಪ್ರಶಾಂತ್ ತಮಂಗ್ 43ನೇ ವಯಸ್ಸಿನಲ್ಲಿ ಹಠಾತ್ತನೆ ನಿಧನರಾಗಿದ್ದಾರೆ. ಪ್ರಶಾಂತ್ ಅವರೊಂದಿಗೆ ಇಂಡಿಯನ್ ಐಡಲ್ 3ನಲ್ಲಿ ಸಹ ಸ್ಪರ್ಧಿಯಾಗಿದ್ದ ಭವೇನ್ ಧನಕ್ ಅವರು ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ಪ್ರಶಾಂತ್ ಇಂದು ಬೆಳಿಗ್ಗೆ ದೆಹಲಿಯಲ್ಲಿ ನಿಧನರಾಗಿದ್ದು ಅವರ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ ಎಂದು ಹೇಳಿದರು.
ಪ್ರಶಾಂತ್ ಅವರ ನಿಧನದಿಂದ ಭವೇನ್ ಕೂಡ ದುಃಖಿತರಾಗಿದ್ದಾರೆ. ಇದು ತುಂಬಾ ಹಠಾತ್ತನೆ ಸಂಭವಿಸಿದೆ. ಆದ್ದರಿಂದ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲ. ಅವರು ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಅಂತ್ಯಕ್ರಿಯೆಯ ಬಗ್ಗೆ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ಪ್ರಶಾಂತ್ ಕೆಲವು ವರ್ಷಗಳ ಹಿಂದೆ ದೆಹಲಿಗೆ ತೆರಳಿದ್ದರು. ನಟನೆ ಮತ್ತು ಗಾಯನ ಬಗ್ಗೆ ಉತ್ಸಾಹ ಹೊಂದಿದ್ದರು. ಇಂಡಿಯನ್ ಐಡಲ್ ಸಮಯದಲ್ಲಿ ನಾವು ರೂಮ್‌ಮೇಟ್‌ಗಳಾಗಿದ್ದೇವು. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಾವೆಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರು ನಿಜವಾಗಿಯೂ ಅದ್ಭುತ ವ್ಯಕ್ತಿ, ಮತ್ತು ಅವರ ನಿಧನವು ನಮಗೆಲ್ಲರಿಗೂ ದೊಡ್ಡ ಆಘಾತವಾಗಿದೆ ಎಂದರು.
ಪ್ರಶಾಂತ್ ತಮಂಗ್ ಅವರು ಪತ್ನಿ ಗೀತಾ ಥಾಪಾ ಮತ್ತು ಚಿಕ್ಕ ಮಗಳು ಆರ್ಯಾಳನ್ನು ಅಗಲಿದ್ದಾರೆ. ಅವರ ಕುಟುಂಬದಲ್ಲಿ ಅವರ ಅಜ್ಜಿ ಮತ್ತು ಸಹೋದರಿ ಕೂಡ ಇದ್ದಾರೆ ಎಂದು ಹೇಳಲಾಗುತ್ತದೆ. ಪ್ರಶಾಂತ್ ಆಗಾಗ್ಗೆ ತಮ್ಮ ಮಗಳು ಮತ್ತು ಪತ್ನಿಯ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಅವರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಿದ್ದರು.
ಪ್ರಶಾಂತ್ ಇತ್ತೀಚೆಗೆ ಸಲ್ಮಾನ್ ಖಾನ್ ಅವರ 'ದಿ ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಇದು ಅವರ ಅಭಿಮಾನಿಗಳಿಗೆ ಅವರ ಕೊನೆಯ ಸ್ಮರಣೀಯ ಚಿತ್ರವಾಗಿದೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅದರ ಟೀಸರ್ ಅನ್ನು ಸಹ ಹಂಚಿಕೊಂಡಿದ್ದರು. ಪ್ರಶಾಂತ್ ಈ ಹಿಂದೆ ನೇಪಾಳ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು.
Advertisement