

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಡ್ರೋನ್ ಗಳು ಪತ್ತೆಯಾಗಿವೆ. ಗುರುವಾರ ಸಂಜೆ ಜಮ್ಮು ಮತ್ತು ಪೂಂಚ್ ಸೆಕ್ಟರ್‌ಗಳಲ್ಲಿ ಕಾಣಿಸಿಕೊಂಡ ಡ್ರೋನ್‌ಗಳ ಮೇಲೆ ಸೇನೆಯು ಗುಂಡು ಹಾರಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ದಿನಗಳಲ್ಲಿ ಮೂರನೇ ಬಾರಿಗೆ ಹೀಗೆ ಡ್ರೋನ್ ಗಳು ಪತ್ತೆಯಾಗಿವೆ.
ಮೊದಲ ಡ್ರೋನ್ ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿತ್ತು. ನಂತರ ಸೇನೆಯು ತಕ್ಷಣವೇ ಗುಂಡಿನ ದಾಳಿ ನಡೆಸಿದೆ ಡ್ರೋನ್ ಹಿಮ್ಮೆಟ್ಟಿಸಿದೆ. ಎರಡನೇ ಡ್ರೋನ್ ಪೂಂಚ್ ಸೆಕ್ಟರ್‌ನ ದೆಗ್ವಾರ್‌ನಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಹೊರಗಿನ ಪಾಕಿಸ್ತಾನಿ ಪಡೆಗಳು ಭಾರತದ ಭಾಗದಲ್ಲಿ ಅಡಗಿರುವ ಉಗ್ರರಿಗೆ ಸಲಕರಣೆ ಕಳುಹಿಸಲು ಡ್ರೋನ್‌ಗಳನ್ನು ಬಳಸುತ್ತಿವೆ.
ಭಯೋತ್ಪಾದಕರು ಎಲ್ಒಸಿ ಅಥವಾ ಅಂತರಾಷ್ಟ್ರೀಯ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಡ್ರೋನ್ ಬಳಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿರೇಖೆಯುದ್ದಕ್ಕೂ ಡ್ರಗ್ಸ್ ಸಾಗಿಸುವ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
Advertisement