

ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸುಮಾರು ಒಂಬತ್ತು ವರ್ಷಗಳ ನಂತರ, ಮುಂಬೈ, ಪುಣೆ, ಥಾಣೆ, ನಾಗ್ಪುರ, ಪಿಂಪ್ರಿ-ಚಿಂಚ್‌ವಾಡ್ ಮತ್ತು ನಾಸಿಕ್‌ನಂತಹ ಪ್ರಮುಖ ನಗರ ಕೇಂದ್ರಗಳು ಸೇರಿದಂತೆ 29 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯವಾಗಿ ಇಂದು ಮತ ಎಣಿಕೆ ನಡೆಯುತ್ತಿದೆ.
ಒಟ್ಟಾರೆ ಶೇ. 46–50 ರಷ್ಟು ಮತದಾನವಾಗಿದ್ದು, ಆರಂಭಿಕ ಟ್ರೆಂಡ್‌ಗಳ ಪ್ರಕಾರ, ನಾಗ್ಪುರದಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ, ಶಿವಸೇನೆ 3 ಮತ್ತು ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಇತರರು ಇನ್ನೂ ಯಾವುದೇ ಮುನ್ನಡೆ ದಾಖಲಿಸಿಲ್ಲ.
ಮತ ಎಣಿಕೆ ಆರಂಭ
ಮಹಾರಾಷ್ಟ್ರದ 29 ನಗರಸಭೆಗಳ ಚುನಾವಣೆಯ ಎಣಿಕೆ ಸಾಗುತ್ತಿದ್ದು, ಮುಂಬೈ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಬಿಜೆಪಿ ನೇತೃತ್ವದ ಮಹಾಯುತಿ ವಿರುದ್ಧ ಠಾಕ್ರೆ ಸೋದರರ ಸ್ಪರ್ಧೆ ಪ್ರತಿಷ್ಠೆಯ ವಿಷಯವಾಗಿದೆ.
ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ ಶಿವಸೇನೆಗಿಂತ ಮುಂದು
ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 55 ವಾರ್ಡ್‌ಗಳಲ್ಲಿ ಮುಂದಿದೆ. ಬಿಜೆಪಿ 42 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಏಕನಾಥ್ ಶಿಂಧೆ ಅವರ ಶಿವಸೇನೆ 13 ವಾರ್ಡ್‌ಗಳಲ್ಲಿ ಮುಂದಿದೆ. ಠಾಕ್ರೆ ಸೋದರರು 31 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗವನ್ನು 'ವೋಟ್ ಚೋರಿ' ಎಂದು ಕರೆದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು 'ವೋಟ್ ಚೋರಿ' ಎಂದು ಆರೋಪಿಸಿದ್ದಾರೆ, ಚುನಾವಣಾ ಆಯೋಗ ರಾಷ್ಟ್ರವಿರೋಧಿ ಕೃತ್ಯ ಮಾಡುತ್ತಿದ್ದು, ಚುನಾವಣಾ ಸಂಸ್ಥೆಯು ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇಂತಹ ಕ್ರಮಗಳು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆಯ ಕುಸಿತಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಶೇ. 52.94 ರಷ್ಟು ಮತದಾನ
2017 ರ ಕಳೆದ ಚುನಾವಣೆಯಲ್ಲಿ ಶೇ. 55.53 ರಷ್ಟು ಮತದಾನ ದಾಖಲಾಗಿದ್ದು, ಈ ಬಾರಿ ಶೇ. 52.94 ರಷ್ಟು ಮತದಾನ ಕಡಿಮೆಯಾಗಿದೆ ಎಂದು ಬಿಎಂಸಿ ತಿಳಿಸಿದೆ.
ನಗರಪಾಲಿಕೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಉಪ ನಗರ ಭಾಂಡಪ್‌ನ ವಾರ್ಡ್ ಸಂಖ್ಯೆ 114 ರಲ್ಲಿ ಶೇ. 64.53 ರಷ್ಟು ಮತದಾನವಾಗಿದ್ದು, ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದ ವಾರ್ಡ್ ಸಂಖ್ಯೆ 227 ರಲ್ಲಿ ಶೇ. 20.88 ರಷ್ಟು ಮತದಾನವಾಗಿದೆ.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು 29 ಮಹಾನಗರ ಪಾಲಿಕೆಗಳಲ್ಲಿ ನಡೆದ ಮತದಾನದ ಅಧಿಕೃತ ಶೇಕಡಾವಾರು ಪ್ರಮಾಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
Advertisement