

ಕೋಲ್ಕತ್ತ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವುದಕ್ಕಾಗಿ ವಲಸೆ ಕಾರ್ಮಿಕರನ್ನು ಹಿಂಸಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಆಡಳಿತಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತರ ಬಂಗಾಳಕ್ಕೆ ತೆರಳಿದ್ದ ಬ್ಯಾನರ್ಜಿ, ಬಿಜೆಪಿ "ರಾಜ್ಯದಲ್ಲಿ ಗಲಭೆಯನ್ನು ಪ್ರಚೋದಿಸಲು ಯೋಜಿಸುತ್ತಿದೆ" ಎಂದು ಆರೋಪಿಸಿದ್ದಾರೆ. ಏಕೆಂದರೆ "ಪಕ್ಷ 2026 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಅರಿತುಕೊಂಡಿದೆ". ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಹೊರಗೆ ವಲಸೆ ಕಾರ್ಮಿಕರ ಮೇಲಿನ ದಾಳಿಯ ಕುರಿತು ಮುರ್ಷಿದಾಬಾದ್‌ನ ಬೆಲ್ಡಂಗಾದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ, ಅಲ್ಪಸಂಖ್ಯಾತ ಸಮುದಾಯದ ಕೋಪವು ನ್ಯಾಯಯುತವಾಗಿದೆ ಎಂದು ಅವರು ಹೇಳಿದರು. ವಲಸೆ ಕಾರ್ಮಿಕರ ವಿರುದ್ಧ ಪದೇ ಪದೇ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಂದ ಈ ಪ್ರತಿಭಟನೆ ಉಂಟಾಗಿದೆ ಎಂದು ಅವರು ಹೇಳಿದರು. "ಬಂಗಾಳದ ವಲಸೆ ಕಾರ್ಮಿಕರನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಹಿಂಸಿಸಲಾಗುತ್ತಿದೆ. ನಾವು ಅವರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಅವರು ಹೇಳಿದರು.
ಇತರ ರಾಜ್ಯಗಳಲ್ಲಿ ಜಿಲ್ಲೆಯಿಂದ ವಲಸೆ ಬಂದ ಕಾರ್ಮಿಕರ ಮೇಲೆ ನಡೆದ ದಾಳಿಗಳನ್ನು ವಿರೋಧಿಸಿ ಮುರ್ಷಿದಾಬಾದ್‌ನ ಸ್ಥಳೀಯರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ 12 ನ್ನು ತಡೆದು ಟೈರ್‌ಗಳನ್ನು ಸುಟ್ಟು ರಸ್ತೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಿಂದ ವಲಸೆ ಬಂದವರು ಬಂಗಾಳಿ ಮಾತನಾಡುವುದಕ್ಕಾಗಿ ಇತರ ರಾಜ್ಯಗಳಲ್ಲಿ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Advertisement