

ಮುಂಬಯಿ: ದೇಶದ ಅತ್ಯಂತ ಶ್ರೀಮಂತ ಪುರಸಭೆಯಾದ ಬಿಎಂಸಿ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿಗಾಗಿ ನಟಿ ಮತ್ತುಸಂಸದೆ ಕಂಗನಾ ರಣಾವತ್ ತಮ್ಮ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿ ನಾಯಕರನ್ನು ಅಭಿನಂದಿಸಿದ್ದಾರೆ.
2020 ರಲ್ಲಿ ಅವಿಭಜಿತ ಶಿವಸೇನೆ ಅಧಿಕಾರದಲ್ಲಿದ್ದಾಗ ಬೃಹತ್ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈನಲ್ಲಿರುವ ಅವರ ಬಂಗಲೆಗೆ ಹೊಂದಿಕೊಂಡ ಕಚೇರಿಯನ್ನು ಕೆಡವಿದ್ದ ನಟಿಗೆ ಇಂದು ನ್ಯಾಯ ಸಿಕ್ಕಿದೆ ಎನ್ನಲಾಗಿದೆ. ಬಿಎಂಸಿ ಚುನಾವಣೆಯಲ್ಲಿ ಶಿವಸೇನೆಯನ್ನು ಕೆಳಗಿಳಿಸಲಾಗಿದೆ.
ಮಹಾರಾಷ್ಟ್ರ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನಿಂದ ನಾನು ಸಂಪೂರ್ಣವಾಗಿ ಸಂತೋಷಗೊಂಡಿದ್ದೇನೆ. ಈ ಅದ್ಭುತ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರದ ಇಡೀ ಬಿಜೆಪಿ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ" ಎಂದು ರಣಾವತ್ ತಿಳಿಸಿದ್ದಾರೆ. ಇದು ನಮಗೆಲ್ಲರಿಗೂ ದೊಡ್ಡ ಗೆಲುವು" ಎಂದು ಅವರು ಹೇಳಿದರು.
ನನ್ನನ್ನು ನಿಂದಿಸಿದ, ನನ್ನ ಮನೆಯನ್ನು ಕೆಡವಿದವರು, ಮಹಾರಾಷ್ಟ್ರ ತೊರೆಯುವಂತೆ ಬೆದರಿಕೆ ಹಾಕಿದವರಿಗೆ, ಇಂದು ಮಹಾರಾಷ್ಟ್ರ ಅವರನ್ನು ತೊರೆದಿದೆ" ಎಂದು ಹೇಳಿದ್ದಾರೆ. ಜನತಾ ಜನಾರ್ದನ್ ಅಂತಹ ಮಹಿಳಾ ದ್ವೇಷಿಗಳು, ಬೆದರಿಸುವವರು ಮತ್ತು ಸ್ವಜನಪಕ್ಷಪಾತ ಮಾಫಿಯಾಗಳಿಗೆ ಸರಿಯಾದ ಸ್ಥಾನವನ್ನು ತೋರಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ" ಎಂದು ಅವರು ತಿಳಿಸಿದ್ದಾರೆ.
2020ರ ಸೆಪ್ಟೆಂಬರ್‌ನಲ್ಲಿ ಮುಂಬೈ ಮಹಾನಗರ ಪಾಲಿಕೆಯು ನಟಿ ಕಂಗನಾ ಅವರ ಕಚೇರಿಯನ್ನು ಧ್ವಂಸಗೊಳಿಸಿದಾಗ, ಅವರು ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನೀಡಿದ್ದ ಎಚ್ಚರಿಕೆ ಇಂದು 2026ರಲ್ಲಿ ನಿಜವಾಗಿದೆ. ಯಾಕೆಂದರೆ, ಕಳೆದ 30 ವರ್ಷಗಳಿಂದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಅಧಿಕಾರ ಕಳೆದುಕೊಂಡಿದೆ. ಅದರಂತೆ, ಈ ಐತಿಹಾಸಿಕ ಬದಲಾವಣೆಯು ಮುಂಬೈ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
2020ರ ಸೆಪ್ಟೆಂಬರ್‌ನಲ್ಲಿ ಕಂಗನಾ ರನೌತ್ ಅವರ ಮುಂಬೈನ ಪಾಲಿ ಹಿಲ್‌ನಲ್ಲಿರುವ ಕಚೇರಿಯನ್ನು ಕಟ್ಟಡ ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ನಿರ್ಮಾಣ ಎಂದು ಬೃಹತ್ ಮುಂಬೈ ಮಹಾನಗರಪಾಲಿಕೆಯು ಆಕೆಯ ಮನೆಯನ್ನ ಧ್ವಂಸಮಾಡಿತ್ತು. ಈ ವೇಳೆ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಂಗನಾ "ಉದ್ಧವ್ ಠಾಕ್ರೆ, ನಿನಗೆ ಏನೆನಿಸುತ್ತದೆ? ಇಂದು ನನ್ನ ಮನೆ ಒಡೆದಿದೆ, ನಾಳೆ ನಿನ್ನ ಅಹಂಕಾರವು ಮುರಿಯುತ್ತದೆ" ಎಂದು ವಿಡಿಯೋ ಸಂದೇಶದ ಮೂಲಕ ನೇರ ಎಚ್ಚರಿಕೆ ನೀಡಿದ್ದರು.
2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ ಭರ್ಜರಿ ಜಯಗಳಿಸಿದೆ. ಮಹಾಯುತಿ ಮೈತ್ರಿಕೂಟವು 227 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿದೆ. ವಿಶೇಷವೆಂದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಸದಸ್ಯರೊಬ್ಬರು ಮುಂಬೈ ಮೇಯರ್ ಆಗಿ ಆಯ್ಕೆಯಾಗಲಿದ್ದಾರೆ
Advertisement