

ಶ್ರೀನಗರ: 'ವಿಮೋಚನಾ ದಿನ' ಆಚರಿಸುತ್ತಿರುವ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರಿ ಪಂಡಿತರು ಕಣಿವೆಗೆ ಮರಳುವುದನ್ನು ಯಾರೂ ತಡೆಯಲಿಲ್ಲ ಎಂದು ಹೇಳಿದರು, ಅವರ ಸಮುದಾಯದ ಅನೇಕರು ಇನ್ನೂ ಈ ಪ್ರದೇಶದಲ್ಲಿ ಆರಾಮವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, "ಕಾಶ್ಮೀರಿ ಪಂಡಿತರು ಇಲ್ಲಿಗೆ ಬರುವುದನ್ನು ಯಾರು ತಡೆಯುತ್ತಿದ್ದಾರೆ? ಯಾರೂ ಇಲ್ಲ. ಅವರು ಇಲ್ಲಿಗೆ ಬಂದು ಆರಾಮವಾಗಿ ಬದುಕಬಹುದು. ಅನೇಕ ಪಂಡಿತರು ಇಲ್ಲಿ ವಾಸಿಸುತ್ತಿದ್ದಾರೆ. ಇತರರು ಕಾಶ್ಮೀರ ಬಿಟ್ಟು ಹೋದಾಗ, ಈಗ ಇಲ್ಲಿರುವವರು ಹೋಗಲಿಲ್ಲ." ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಪುನರ್ವಸತಿ ನೀತಿಯನ್ನು ಒತ್ತಾಯಿಸುತ್ತಿರುವ ಕಾಶ್ಮೀರಿ ಪಂಡಿತರ ಕುರಿತು ಅಬ್ದುಲ್ಲಾ ಮಾತನಾಡಿದ್ದು, "ನನ್ನ ಅಧಿಕಾರಾವಧಿಯಲ್ಲಿ, ನಾವು ಅವರಿಗೆ ಮನೆಗಳನ್ನು ನಿರ್ಮಿಸುತ್ತೇವೆ ಎಂದು ನಾನು ಭರವಸೆ ನೀಡಿದ್ದೆ, ಆದರೆ ನಂತರ ನಾವು ಅಧಿಕಾರವನ್ನು ಕಳೆದುಕೊಂಡಿದ್ದೇವೆ. ಈಗ ದೆಹಲಿ (ಕೇಂದ್ರ ಸರ್ಕಾರ) ಇದನ್ನು ನೋಡಬೇಕಾಗಿದೆ." ಎಂದು ಹೇಳಿದ್ದಾರೆ.
1990 ರಲ್ಲಿ ಪಾಕಿಸ್ತಾನ ಬೆಂಬಲಿತ ಮೂಲಭೂತವಾದಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಬೆದರಿಕೆ ಹಾಕಿ, ಅವರನ್ನು ಪಲಾಯನ ಮಾಡುವಂತೆ ಒತ್ತಾಯಿಸಲಾಗಿತ್ತು. ಕಣಿವೆಯಿಂದ ಸಾಮೂಹಿಕ ವಲಸೆಯನ್ನು ಗುರುತಿಸಲು ಕಾಶ್ಮೀರಿ ಪಂಡಿತರು ಜನವರಿ 19 ನ್ನು 'ಹತ್ಯಾಕಾಂಡದ ಸ್ಮರಣಾರ್ಥ ದಿನ/ವಿಮೋಚನಾ ದಿನ'ವಾಗಿ ಆಚರಿಸುತ್ತಾರೆ.
ಬಾಲಿವುಡ್ ಬಗ್ಗೆ ಎ.ಆರ್. ರೆಹಮಾನ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ, ಎನ್‌ಸಿ ಮುಖ್ಯಸ್ಥರು, "ನಮ್ಮ ಭಾರತದಲ್ಲಿ, ಕಳೆದ ಕೆಲವು ವರ್ಷಗಳಿಂದ ದ್ವೇಷದ ಬೆಂಕಿಯನ್ನು ಹೊತ್ತಿಸಲಾಗುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸಲಾಗುತ್ತಿದೆ" ಎಂದು ಹೇಳಿದರು.
ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್, ಇತ್ತೀಚಿನ ವರ್ಷಗಳಲ್ಲಿ ಹಿಂದಿ ಚಲನಚಿತ್ರೋದ್ಯಮದ ಕೆಲಸಗಳು ತಮಗೆ ನಿಧಾನವಾಗಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿ ಉದ್ಯಮದಲ್ಲಿನ ಕೋಮುವಾದದ ಬದಲಾವಣೆಗಳು ಇದಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದರು.
Advertisement