2026 ತಮಿಳುನಾಡು ವಿಧಾನಸಭಾ ಚುನಾವಣೆ: ಆಯೋಗದಿಂದ ಚಿಹ್ನೆ ಪಡೆದ TVK!

ಟಿವಿಕೆ ಪಕ್ಷದ ಚಿಹ್ನೆ ಸಿಳ್ಳೆ ( Whistle) ಆದರೆ MNM ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ನೀಡಲಾಗಿದೆ.
Vijay
ದಳಪತಿ ವಿಜಯ್
Updated on

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಂತೆಯೇ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಮತ್ತು ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ (MNM)ಗೆ ಭಾರತೀಯ ಚುನಾವಣಾ ಆಯೋಗ ಗುರುವಾರ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.

ಟಿವಿಕೆ ಪಕ್ಷದ ಚಿಹ್ನೆ ಸಿಳ್ಳೆ ( Whistle) ಆದರೆ MNM ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ನೀಡಲಾಗಿದೆ.

ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯ ಪ್ರಣಾಳಿಕೆ ರೂಪಿಸಲು ಟಿವಿಕೆ ಮಂಗಳವಾರ ಚೆನ್ನೈನಲ್ಲಿ ತನ್ನ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆ ನಡೆಸಿತ್ತು. ಇದಾದ ಎರಡು ದಿನಗಳಲ್ಲಿ ಇದೀಗ ಚುನಾವಣಾ ಆಯೋಗದಿಂದ ಚುನಾವಣಾ ಚಿಹ್ನೆ ಪಡೆದುಕೊಂಡಿದೆ.

Vijay
ತಮಿಳುನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ TVK ಪಕ್ಷಕ್ಕೆ ಸೆಂಗೊಟ್ಟೈಯನ್ ಸೇರ್ಪಡೆ

ಮುಂಬರುವ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗಳಿಗೆ ಮಾತ್ರ ಆಯಾ ಪಕ್ಷಗಳಿಗೆ ಸಾಮಾನ್ಯ ಚಿಹ್ನೆಯನ್ನು ನೀಡಲಾಗಿದೆ. ಆಯಾ ಪಕ್ಷ(ಗಳು) ಚುನಾವಣೆಯ ನಂತರ ಸಾಮಾನ್ಯ ಚಿಹ್ನೆಯನ್ನು ಬಳಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com