50 ರವರೆಗೆ ಸಂಖ್ಯೆ ಬರೆಯಲು ವಿಫಲವಾದ ಮಗಳನ್ನು ಕೊಂದ ತಂದೆ!

ಜನವರಿ 21 ರಂದು ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಜೈಸ್ವಾಲ್ ಮಗುವಿಗೆ ಒಂದರಿಂದ 50 ರವರೆಗೆ ಸಂಖ್ಯೆಗಳನ್ನು ಬರೆಯಲು ಹೇಳಿದ್ದ.
crime, file photo
ಅಪರಾಧonline desk
Updated on

ಹರ್ಯಾಣ: ತನ್ನ ನಾಲ್ಕು ವರ್ಷದ ಮಗಳಿಗೆ ಮನೆ ಪಾಠ ಹೇಳಲು ತಂದೆಯೊಬ್ಬ ಮಾಡಿದ ಪ್ರಯತ್ನ ಮಾರಕವಾಗಿ ಪರಿಣಮಿಸಿದೆ.

ಹರ್ಯಾಣದಲ್ಲಿ ಈ ಘಟನೆ ನಡೆದಿದ್ದು, 50 ರವರೆಗಿನ ಸಂಖ್ಯೆಗಳನ್ನು ಬರೆಯಲು ವಿಫಲವಾದ ಕಾರಣಕ್ಕಾಗಿ ಮಗುವನ್ನು ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ನಂತರ ಆರೋಪಿ ಕೃಷ್ಣ ಜೈಸ್ವಾಲ್ (31) ಅವರನ್ನು ಬಂಧಿಸಲಾಗಿದೆ. ಶುಕ್ರವಾರ ಅವರನ್ನು ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಖೇರತಿಯಾ ಗ್ರಾಮದ ನಿವಾಸಿ ಜೈಸ್ವಾಲ್, ಫರಿದಾಬಾದ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

crime, file photo
ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಜೈಶ್ ಭಯೋತ್ಪಾದಕನ ಹತ್ಯೆ

ಜೈಸ್ವಾಲ್ ಮತ್ತು ಅವರ ಪತ್ನಿ ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ತಾಯಿ ಹಗಲಿನಲ್ಲಿ ಕೆಲಸ ಮಾಡುತ್ತಿದ್ದರೆ, ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮಗಳ ಪಾಠಗಳನ್ನು ಮೇಲ್ವಿಚಾರಣೆ ಮಾಡಲು ಜೈಸ್ವಾಲ್ ಮನೆಯಲ್ಲಿಯೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 21 ರಂದು ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಜೈಸ್ವಾಲ್ ಮಗುವಿಗೆ ಒಂದರಿಂದ 50 ರವರೆಗೆ ಸಂಖ್ಯೆಗಳನ್ನು ಬರೆಯಲು ಹೇಳಿದ್ದ.

ಆಕೆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಾಗ, ಅವನು ಹಿಂಸಾತ್ಮಕವಾಗಿ ವರ್ತಿಸಿ ಅವಳನ್ನು ಥಳಿಸಿ, ಆಕೆಯ ಸಾವಿಗೆ ಕಾರಣನಾಗಿದ್ದಾನೆ. ಸಂಜೆ ತಾಯಿ ಕೆಲಸದಿಂದ ಹಿಂತಿರುಗಿದಾಗ ಹುಡುಗಿ ಮೃತಪಟ್ಟಿರುವುದನ್ನು ಕಂಡಾಗ ವಿಷಯ ಬೆಳಕಿಗೆ ಬಂದಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳೀಯ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದರು. "ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ" ಎಂದು ಫರಿದಾಬಾದ್ ಪೊಲೀಸರ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com