

ಪಣಜಿ: ಗೋ ರಕ್ಷಣೆಗಾಗಿ ಘೋಷಣೆಗಳನ್ನು ಕೂಗುವುದರಿಂದ ಮಾತ್ರ ಪ್ರಯೋಜನವಾಗುವುದಿಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
ಪಣಜಿಯಲ್ಲಿ ಯೋಗ ಅಧಿವೇಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮದೇವ್, ಗೋ ರಕ್ಷಣೆಗೆ ಯಾವುದೇ ಪ್ರಯತ್ನವನ್ನು ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ಕೈಗೊಳ್ಳಬೇಕು ಎಂದು ಹೇಳಿದರು.
ಗೋ ರಕ್ಷಣೆ'ಯನ್ನು ಕೇವಲ ಸಮ್ಮೇಳನಗಳನ್ನು ಆಯೋಜಿಸುವುದರಿಂದ, ಘೋಷಣೆಗಳನ್ನು ಕೂಗುವುದರಿಂದ ಮತ್ತು ಗೋವುಗಳ ಹೆಸರಿನಲ್ಲಿ ರಕ್ತಪಾತ ನಡೆಸುವುದರಿಂದ ರಕ್ಷಣೆ ಮಾಡಲಾಗದು. ಇಂದು, ಪತಂಜಲಿ ಒಂದು ಲಕ್ಷ ಗೋವುಗಳನ್ನು ರಕ್ಷಿಸುತ್ತಿದೆ. ಪ್ರತಿಯೊಬ್ಬ ಶಂಕರಾಚಾರ್ಯರು ತಾಯಿ ಹಸುವನ್ನು ರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ. ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುವ ಮೂಲಕ ಗೋ ರಕ್ಷಣೆಯನ್ನು ಮಾಡಲಾಗುತ್ತದೆಯೆ ಎಂದು ಬಾಬಾ ರಾಮ್ ದೇವ್ ಪ್ರಶ್ನಿಸಿದ್ದಾರೆ.
ಭಾರತವು ಆರೋಗ್ಯಕ್ಕಾಗಿ ಜಾಗತಿಕ ತಾಣ ಮತ್ತು ಸನಾತನ ಜ್ಞಾನದ ತಾಣವಾಗಬೇಕೆಂಬುದು ಪ್ರಧಾನಿ ಮೋದಿಯವರ ಕನಸಾಗಿ ಎಂದು ಅವರು ಹೇಳಿದರು. ಆರೋಗ್ಯ, ಸ್ವಾಸ್ಥ್ಯ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕಾಗಿ ಜನರನ್ನು ಗೋವಾಕ್ಕೆ ಕರೆತರುವತ್ತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
"ಸ್ವಯಂ-ಗುಣಪಡಿಸುವಿಕೆಯಿಂದ ಹಿಡಿದು ಸ್ವಯಂ-ಸಾಕ್ಷಾತ್ಕಾರದವರೆಗೆ ಎಲ್ಲದಕ್ಕೂ ಜನರು ಇಲ್ಲಿಗೆ ಬರಬೇಕು. ಗೋವಾ ಒಂದು ಸುಂದರ ಮತ್ತು ಆಳವಾದ ಆಧ್ಯಾತ್ಮಿಕ ಸ್ಥಳವಾಗಿದೆ. ಸುಸ್ಥಿರ ಆರೋಗ್ಯಕ್ಕಾಗಿ ಜನರು ಇಲ್ಲಿಗೆ ಬರಬೇಕು" ಎಂದು ಅವರು ಹೇಳಿದರು. ಪತಂಜಲಿಯ ಅತಿದೊಡ್ಡ ಕ್ಷೇಮ ಕೇಂದ್ರವನ್ನು ಗೋವಾದಲ್ಲಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ನಿರ್ಮಿಸಲಾಗುವುದು ಎಂದು ಅವರು ಘೋಷಿಸಿದರು.
Advertisement