ನಾನು ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ: ಆಪರೇಷನ್ ಸಿಂಧೂರ್ ಬಗ್ಗೆ ಶಶಿ ತರೂರ್ ಮಹತ್ವದ ಹೇಳಿಕೆ, ಕೋಲಾಹಲ!

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹದ ನಡುವೆ, ಪಕ್ಷದ ಹಿರಿಯ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮೌನ ಮುರಿದಿದ್ದಾರೆ. ಟೀಕಾಕಾರರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದ್ದು ನಾನು ಎಂದಿಗೂ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ...
Shashi Tharoor
ಶಶಿ ತರೂರ್
Updated on

ನವದೆಹಲಿ: ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹದ ನಡುವೆ, ಪಕ್ಷದ ಹಿರಿಯ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮೌನ ಮುರಿದಿದ್ದಾರೆ. ಟೀಕಾಕಾರರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದ್ದು ನಾನು ಎಂದಿಗೂ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಸಂಸದ ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದು ಅದು ಪಕ್ಷದ ನಾಯಕತ್ವಕ್ಕೆ, ವಿಶೇಷವಾಗಿ ರಾಹುಲ್ ಗಾಂಧಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆಪರೇಷನ್ ಸಿಂಧೂರ್ ಬಗ್ಗೆ ತರೂರ್ ಅವರ ನಿಲುವು ಪಕ್ಷದೊಳಗಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಬಹುದು.

ಕೇರಳ ಸಾಹಿತ್ಯ ಉತ್ಸವದ ಸಂದರ್ಭದಲ್ಲಿ ಕೋಝಿಕ್ಕೋಡ್‌ನಲ್ಲಿ ನಡೆದ ಸಂವಾದ ಅಧಿವೇಶನದಲ್ಲಿ ಮಾತನಾಡಿದ ತರೂರ್, ಸಂಸತ್ತಿನಲ್ಲಿ ನಾನು ಕಾಂಗ್ರೆಸ್ ನಿಮಯವನ್ನು ಉಲ್ಲಂಘಿಸಿಲ್ಲ. ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ತಮ್ಮ ನಿಲುವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ವಿಷಯದ ಬಗ್ಗೆ ಸಾರ್ವಜನಿಕವಾಗಿ ತಾತ್ವಿಕ ಭಿನ್ನಾಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದೇನೆ. ಆ ನಿಲುವಿನ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ನಾಯಕತ್ವದೊಂದಿಗಿನ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಇತ್ತೀಚೆಗೆ ಊಹಾಪೋಹಗಳು ತೀವ್ರಗೊಂಡಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ.

ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೇದಿಕೆಯಲ್ಲಿದ್ದ ನಾಯಕರ ಪಟ್ಟಿಯಿಂದ ತರೂರ್ ಅವರ ಹೆಸರನ್ನು ಕೈಬಿಟ್ಟಿದ್ದರಿಂದ ಅವರಿಗೆ ನೋವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದಲ್ಲದೆ, ಕೆಲವು ರಾಜ್ಯ ಮಟ್ಟದ ನಾಯಕರು ಅವರನ್ನು ಕಡೆಗಣಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ.

Shashi Tharoor
ತಿರುವನಂತಪುರಂ: ಮೋದಿ ಭೇಟಿ ವೇಳೆ ಅಕ್ರಮ ಫ್ಲೆಕ್ಸ್‌; ಬಿಜೆಪಿ ನೇತೃತ್ವದ ಪಾಲಿಕೆಯಿಂದ ಕೇಸರಿ ಪಕ್ಷಕ್ಕೆ 20 ಲಕ್ಷ ರೂ. ದಂಡ!

ಈ ಊಹಾಪೋಹಗಳ ನಡುವೆ, ತರೂರ್ ತಮ್ಮ ನಿಲುವನ್ನು ವಿವರಿಸುತ್ತಾ, ಸಂಸದೀಯ ಸದಸ್ಯ ಮತ್ತು ಬರಹಗಾರರಾಗಿ ತಾವು ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು. ಪಹಲ್ಗಾಮ್ ಘಟನೆಯ ನಂತರ, ಅವರು ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಬರೆದು, ಅಂತಹ ಘಟನೆಗಳಿಗೆ ಉತ್ತರಿಸಲು ಬಿಡಬಾರದು. ಭಯೋತ್ಪಾದಕ ಮೂಲಸೌಕರ್ಯದ ವಿರುದ್ಧ ಸೀಮಿತ ಮತ್ತು ನಿರ್ಣಾಯಕ ಕ್ರಮ ಅಗತ್ಯ ಎಂದು ವಾದಿಸಿದ್ದರು. ಭಾರತವು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಮತ್ತು ಪಾಕಿಸ್ತಾನದೊಂದಿಗೆ ದೀರ್ಘಕಾಲದ ಮಿಲಿಟರಿ ಸಂಘರ್ಷದಲ್ಲಿ ತೊಡಗಬಾರದು ಎಂದು ಅವರು ನಂಬಿದ್ದರು. ಆದರೆ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಳ್ಳುವಂತಹ ಸೀಮಿತ ಕ್ರಮವು ಸೂಕ್ತವಾಗಿರುತ್ತದೆ ಎಂದು ತರೂರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com