ಜಾರ್ಖಂಡ್: ಪೊಲೀಸ್ ಠಾಣೆಯೊಳಗೆ ಸಮವಸ್ತ್ರದಲ್ಲೇ ರೊಮ್ಯಾಂಟಿಕ್ ರೀಲ್‌ ಮಾಡಿದ ಅಧಿಕಾರಿ; ತನಿಖೆಗೆ ಆದೇಶ

ವೈರಲ್ ಆಗಿರುವ ವೀಡಿಯೊದಲ್ಲಿ, ಇನ್ಸ್‌ಪೆಕ್ಟರ್ ಸೋನು ಚೌಧರಿ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
Jharkhand cop under scanner over viral romantic reel shot in uniform inside police station
ಇನ್ಸ್‌ಪೆಕ್ಟರ್ ಸೋನು ಚೌಧರಿ ಹಾಗೂ ಅವರ ಪತ್ನಿ
Updated on

ರಾಂಚಿ: ಜಾರ್ಖಂಡ್‌ನ ಪಲಮುವಿನ ಹುಸೇನಾಬಾದ್ ಪೊಲೀಸ್ ಠಾಣೆಯ ಆವರಣದಲ್ಲಿ ಪತ್ನಿಯೊಂದಿಗೆ ಸಮವಸ್ತ್ರದಲ್ಲೇ ಚಿತ್ರೀಕರಿಸಲಾದ ರೊಮ್ಯಾಂಟಿಕ್ ರೀಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ನಡೆ ವಿವಾದಕ್ಕೆ ಕಾರಣವಾಗಿದೆ.

ಹುಸೇನಾಬಾದ್ ಎಸ್‌ಡಿಪಿಒ ಮೊಹಮ್ಮದ್ ಯಾಕೂಬ್ ಅವರು, ಈ ರೀಲ್ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ, ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಇನ್ಸ್‌ಪೆಕ್ಟರ್ ಸೋನು ಚೌಧರಿ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ಪತ್ನಿಯೊಂದಿಗೆ ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.

Jharkhand cop under scanner over viral romantic reel shot in uniform inside police station
ಶಿವಮೊಗ್ಗ: ಪೊಲೀಸ್ ಠಾಣೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಶವ ಪತ್ತೆ!

ವಿಡಿಯೋದ ಸಮಯದಲ್ಲಿ ಅವರು ತಮ್ಮ ಪತ್ನಿಯ ತಲೆಯ ಮೇಲೆ ತಮ್ಮ ಕ್ಯಾಪ್ ಹಾಕುತ್ತಿರುವುದನ್ನು ಸಹ ಕಾಣಬಹುದು.

ಈ ರೀಲ್ ವಿಷಯ ಹಿರಿಯ ಅಧಿಕಾರಿಗಳಿಗೆ ತಲುಪಿದ ನಂತರ, ತಕ್ಷಣ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಸಮವಸ್ತ್ರ ಮತ್ತು ಸರ್ಕಾರಿ ಆವರಣದ ಬಳಕೆಗೆ ಸಂಬಂಧಿಸಿದ ಯಾವುದೇ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂದು ತನಿಖೆ ಮಾಡಲಾಗುತ್ತಿದೆ.

ಇನ್ಸ್‌ಪೆಕ್ಟರ್ ತಪ್ಪಿತಸ್ಥರೆಂದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಲಮು ಎಸ್ಪಿ ರೀಷ್ಮಾ ರಮೇಶನ್ ಅವರು ಹೇಳಿದ್ದಾರೆ.

ಚೌಧರಿ 2012 ರ ಬ್ಯಾಚ್ ಸಬ್-ಇನ್‌ಸ್ಪೆಕ್ಟರ್ ಆಗಿದ್ದು, 2024 ರಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com