ತ್ರಿವರ್ಣ ಧ್ವಜಾರೋಹಣ ವೇಳೆ ಖ್ಯಾತ IAS ಅಧಿಕಾರಿ ಯಡವಟ್ಟು! VIDEO ವೈರಲ್, ನೆಟ್ಟಿಗರ ಕಿಡಿ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೇ ವಿವ್ಹ್ ಬಂದಿದೆ. ರಾಷ್ಟ್ರೀಯ ಹಬ್ಬದಲ್ಲಿ ಉನ್ನತ ಅಧಿಕಾರಿಯ ಗೊಂದಲದ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
 IAS officer Tina Dabi
IAS ಅಧಿಕಾರಿ ಟೀನಾ ದಾಬಿ
Updated on

ಬಾರ್ಮರ್‌: ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಹಿರಿಯ IAS ಅಧಿಕಾರಿ ಟೀನಾ ದಾಬಿ ಮಾಡಿದ ಯಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ, ಧ್ವಜಾರೋಹಣ ಮಾಡುವಾಗ ದಾಬಿ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಅತ್ಯುನ್ನತ ನಾಗರಿಕ ಅಧಿಕಾರಿಗಳ ಮೇಲಿನ ನಿರೀಕ್ಷೆಗಳ ಬಗ್ಗೆ ಆನ್‌ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬಾರ್ಮರ್‌ನ ಜಿಲ್ಲಾಧಿಕಾರಿಯಾಗಿರುವ ಟೀನಾ ದಾಬಿ, ಧ್ವಜಾರೋಹಣ ಮಾಡಿದ ನಂತರ ಹಿಂದಕ್ಕೆ ತಿರುಗಿ ಗೌರವ ವಂದನೆ ಸಲ್ಲಿಸುತ್ತಾರೆ. ಬಳಿಕ ಅಲ್ಲಿಯೇ ಇದ್ದ ಭದ್ರತಾ ಸಿಬ್ಬಂದಿಯೊಬ್ಬರು ನೀಡಿದ ಸಲಹೆಯಂತೆ ಸರಿಯಾದ ದಿಕ್ಕಿಗೆ ತಿರುಗಿ ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೇ ವಿವ್ಹ್ ಬಂದಿದೆ. ರಾಷ್ಟ್ರೀಯ ಹಬ್ಬದಲ್ಲಿ ಉನ್ನತ ಅಧಿಕಾರಿಯ ಗೊಂದಲದ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಮೀಸಲಾತಿಯಿಂದ ಬಂದವರು ಹೀಗೆ ಯಡವಟ್ಟಿನವರು ಎಂದು ಮೊದಲಿಸುತ್ತಿದ್ದಾರೆ.

ಮತ್ತೆ ಕೆಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇಡೀ ಘಟನೆ ಕೆಲವೇ ಸೆಕೆಂಡ್ ಗಳಲ್ಲಿ ಮುಗಿದಿದ್ದು, ಕಾರ್ಯಕ್ರಮ ಯಾವುದೇ ಅಡತಡೆ ಇಲ್ಲದೆ ಪೂರ್ಣಗೊಂಡಿದೆ.

ಆದಾಗ್ಯೂ, ಯಾಕೆ ಹೀಗಾಯಿತು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ತನ್ನ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ. ಬಿಡುವಿಲ್ಲದ ಕೆಲಸದ ಒತ್ತಡದಿಂದ ಈ ರೀತಿ ಸ್ವಲ್ಪ ಗೊಂದಲಕ್ಕೆ ಒಳಗಾಗಿರುವುದಾಗಿ ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಟೀನಾ ದಾಬಿ, ರಾಜಸ್ಥಾನ ಕೇಡರ್‌ನ 2016-ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ದೇಶದ ಅತ್ಯಂತ ಪ್ರಸಿದ್ಧ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಅವರು 2015 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ನಂತರ ದೇಶದಾದ್ಯಂತ ಪ್ರಸಿದ್ಧಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com