

ಮುಂಬೈ: ಬಾರಾಮತಿಯಲ್ಲಿ ಬೆಳಿಗ್ಗೆ 8.45 ಕ್ಕೆ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದರು. ಲ್ಯಾಂಡಿಂಗ್ ಮಾಡುವಾಗ ನಿಯಂತ್ರಣ ಕಳೆದುಕೊಂಡ ಕೆಲವೇ ನಿಮಿಷಗಳ ನಂತರ. ತುರ್ತು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆ ಅವಶೇಷಗಳಿಂದ ಬೆಂಕಿ ಮತ್ತು ಹೊಗೆಯ ದಟ್ಟಣೆ ಹೆಚ್ಚಾಯಿತು.
ಲಿಯರ್‌ಜೆಟ್ 45 ವಿಮಾನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ), ಒಬ್ಬ ಸಹಾಯಕ ಮತ್ತು ಇಬ್ಬರು ಸಿಬ್ಬಂದಿ ಇದ್ದರು - ಒಬ್ಬ ಪೈಲಟ್-ಇನ್-ಕಮಾಂಡ್ (ಪಿಐಸಿ) ಮತ್ತು ಒಬ್ಬ ಸೆಕೆಂಡ್-ಇನ್-ಕಮಾಂಡ್ (ಎಸ್‌ಐಸಿ) ಇದ್ದರು.
ಈ ಘಟನೆ ನಡೆಯುವುದಕ್ಕೂ 18 ತಿಂಗಳ ಮುನ್ನ ಅಜಿತ್ ಪವಾರ್ ಹೆಲಿಕಾಪ್ಟರ್ ದುರಂತವೊಂದರಿಂದ ಪಾರಾಗಿದ್ದರು. 2024 ರ ಜುಲೈ ನಲ್ಲಿ ನಾಗ್ಪುರದಿಂದ ಗಡ್ಚಿರೋಲಿಗೆ ಉಕ್ಕಿನ ಯೋಜನೆಯ ಶಿಲಾನ್ಯಾಸ ಸಮಾರಂಭಕ್ಕಾಗಿ ಡಿಸಿಎಂ ಅಜಿತ್ ಪವಾರ್ ಅಂದಿನ ಡಿಸಿಎಂ ದೇವೇಂದ್ರ ಫಡ್ನವಿಸ್, ಕೈಗಾರಿಕೆ ಖಾತೆ ಸಚಿವ ಉದಯ್ ಸಾಮಂತ್ ಜೊತೆ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದರು.
ಮಾರ್ಗ ಮಧ್ಯೆ ದಟ್ಟವಾದ ಮುಂಗಾರು ಮೋಡಗಳು ಆವರಿಸಿದ್ದರಿಂದ ಹೆಲಿಕಾಪ್ಟರ್ ಕಳಪೆ ಗೋಚರತೆಯಿಂದಾಗಿ ದಾರಿ ತಪ್ಪಿತ್ತು. ಸಂತಸದಲ್ಲಿದ್ದ ಅಜಿತ್ ಪವಾರ್ ಗೆ ಆತಂಕ ಎದುರಾಗಿತ್ತು. ಅವರ ಪಕ್ಕದಲ್ಲೇ ಕುಳಿತಿದ್ದ ದೇವೇಂದ್ರ ಫಡ್ನವಿಸ್ ಆರು ವಿಮಾನ ಅಪಘಾತಗಳಿಂದ ಪಾರಾಗಿದ್ದರು. ಗಾಬರಿಯಾಗಿದ್ದ ಅಜಿತ್ ಪವಾರ್ ಅವರನ್ನು ಗಮನಿಸಿದ ಫಡ್ನವಿಸ್ ಸಮಾಧಾನಪಡಿಸಿ, ಧೈರ್ಯ ತುಂಬಿದ್ದರು. ಅದೃಷ್ಟವಶಾತ್ ಹೆಲಿಕಾಪ್ಟರ್ ನ ಪೈಲಟ್ ನ ಕೌಶಲ್ಯದಿಂದಾಗಿ ಹೆಲಿಕಾಪ್ಟರ್ ಸುರಕ್ಷಿತವಾಗಿ ನಿಗದಿತ ಜಾಗದಲ್ಲಿ ಲ್ಯಾಂಡ್ ಆಗಿತ್ತು.
ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಪವಾರ್ ನಂತರ ಕಾರ್ಯಕ್ರಮದಲ್ಲಿ, "ಉದಯ್ ಸಮಂತ್ ಅವರು ಲ್ಯಾಂಡಿಂಗ್ ಸೈಟ್ ನ್ನು ನೋಡುವಂತೆ ನನಗೆ ಹೇಳಿದರು. ಕಿಟಕಿಯಿಂದ ಅದನ್ನು ನೋಡಿದ ನಂತರ, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ" ಎಂದು ಹೇಳಿದ್ದರು. ಇದಾದ 18 ತಿಂಗಳಲ್ಲಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
Advertisement