Ajit Pawar: ಇಂದು ಮಧ್ಯಾಹ್ನ ಬಾರಾಮತಿಯಲ್ಲಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ

ಜನರು ಅಂತಿಮ ನಮನ ಸಲ್ಲಿಸಲು ಅವರ ಸ್ವಗೃಹದಲ್ಲಿರುವ ವಿದ್ಯಾ ಪ್ರತಿಷ್ಠಾನದ ಆವರಣಕ್ಕೆ ಅವರ ಪಾರ್ಥಿವ ಶರೀರವನ್ನು ತರುವಾಗ "ಅಜಿತ್ ದಾದಾ ಅಮರ್ ರಹೇ", "ಅಜಿತ್ ದಾದಾ ಪರತ್ ಯಾ" (ಅಜಿತ್ ದಾದಾ ದೀರ್ಘಕಾಲ ಬದುಕಲಿ; ಅಜಿತ್ ದಾದಾ, ಹಿಂತಿರುಗಿ) ಎಂಬ ಘೋಷಣೆಗಳು ಪ್ರತಿಧ್ವನಿಸಿದವು.
People pay their last respects to Maharashtra Deputy Chief Minister Ajit Pawar.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಜನರು ಅಂತಿಮ ನಮನ ಸಲ್ಲಿಸುತ್ತಿರುವುದು
Updated on

ಪುಣೆ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪಾರ್ಥಿವ ಶರೀರವನ್ನು ನಿನ್ನೆ ಬುಧವಾರ ಸಂಜೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿರುವ ಶಿಕ್ಷಣ ಸಂಸ್ಥೆಗೆ ತರಲಾಯಿತು, ತೀವ್ರ ಭಾವೋದ್ವೇಗದ ನಡುವೆ, ದುಃಖಿತ ಎನ್‌ಸಿಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ದಿವಂಗತ ನಾಯಕನನ್ನು ಹೊಗಳುತ್ತಾ ಘೋಷಣೆಗಳನ್ನು ಕೂಗಿದರು.

ಜನರು ಅಂತಿಮ ನಮನ ಸಲ್ಲಿಸಲು ಅವರ ಸ್ವಗೃಹದಲ್ಲಿರುವ ವಿದ್ಯಾ ಪ್ರತಿಷ್ಠಾನದ ಆವರಣಕ್ಕೆ ಅವರ ಪಾರ್ಥಿವ ಶರೀರವನ್ನು ತರುವಾಗ "ಅಜಿತ್ ದಾದಾ ಅಮರ್ ರಹೇ", "ಅಜಿತ್ ದಾದಾ ಪರತ್ ಯಾ" (ಅಜಿತ್ ದಾದಾ ದೀರ್ಘಕಾಲ ಬದುಕಲಿ; ಅಜಿತ್ ದಾದಾ, ಹಿಂತಿರುಗಿ) ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

People pay their last respects to Maharashtra Deputy Chief Minister Ajit Pawar.
'ಮಹಾ' ಡಿಸಿಎಂ ಅಜಿತ್ ಪವಾರ್ ದುರಂತ ಸಾವು ಬೆನ್ನಲ್ಲೇ ಬಾರಾಮತಿಯಲ್ಲಿ ತುರ್ತು ATC ತಂಡ ನಿಯೋಜಿಸಿದ IAF

ನಿನ್ನೆ ಬೆಳಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಟೇಬಲ್‌ಟಾಪ್ ರನ್‌ವೇಯ ಅಂಚಿನಿಂದ ಕೇವಲ 200 ಮೀಟರ್ ದೂರದಲ್ಲಿ ಅಜಿತ್ ಪವಾರ್ (66ವ) ಮತ್ತು ಚಾರ್ಟರ್ಡ್ ವಿಮಾನದಲ್ಲಿದ್ದ ಇತರ ನಾಲ್ವರು ಮೃತಪಟ್ಟರು. ಅವರ ಸಾವು ಬಿಜೆಪಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ನಿರ್ವಾತವನ್ನು ಉಂಟುಮಾಡಿದೆ ಮಾತ್ರವಲ್ಲದೆ ಅವರು ನೇತೃತ್ವ ವಹಿಸಿದ್ದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಭವಿಷ್ಯದ ಮೇಲೆಯೂ ಕತ್ತಲೆ ಆವರಿಸಿದೆ.

ಬಾರಾಮತಿಯ ವೈದ್ಯಕೀಯ ಕಾಲೇಜಿನಲ್ಲಿ ಇಡಲಾಗಿದ್ದ ಪಾರ್ಥಿವ ಶರೀರವನ್ನು ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ವಿದ್ಯಾ ಪ್ರತಿಷ್ಠಾನಕ್ಕೆ ಸಾಗಿಸಲಾಯಿತು. ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಜನರು ಮೆರವಣಿಗೆ ಸಾಗುತ್ತಿದ್ದಂತೆ ಭಾವುಕರಾದರು.

People pay their last respects to Maharashtra Deputy Chief Minister Ajit Pawar.
ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

ಇಂದು ಅಂತ್ಯಕ್ರಿಯೆ

ಇಂದು ಗುರುವಾರ ಬೆಳಗ್ಗೆ 11 ಗಂಟೆಗೆ ಪವಾರ್ ಕುಟುಂಬ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಾದ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅಂತ್ಯಕ್ರಿಯೆಯನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಕೀಯ ರಂಗದ ನಾಯಕರು ಮತ್ತು ಎಲ್ಲಾ ವರ್ಗದ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ರಾಜಕೀಯವಾಗಿ ಪ್ರಬಲವಾಗಿರುವ ಪವಾರ್ ಕುಟುಂಬದೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿದ್ದ ಬಾರಾಮತಿ ಮತ್ತು ರಾಜ್ಯದಾದ್ಯಂತದ ಜನರು ಮತ್ತು ಪಕ್ಷದ ಕಾರ್ಯಕರ್ತರು ದಿವಂಗತ ನಾಯಕನಿಗೆ ಗೌರವ ಸಲ್ಲಿಸಲು ಪಟ್ಟಣಕ್ಕೆ ಆಗಮಿಸಿದ್ದಾರೆ.

ಅಜಿತ್ ಪವಾರ್ ಅವರ ಹಠಾತ್ ಮರಣವನ್ನು ಬಾರಾಮತಿ ಜನಕ್ಕೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಶಿಕ್ಷಕ ಮನೋಜ್ ವಾಘ್ ಹೇಳುತ್ತಾರೆ. ಬಾರಾಮತಿಯ ಪ್ರತಿಯೊಂದು ಅಭಿವೃದ್ಧಿ ಕಾರ್ಯವು ಅಜಿತ್ ದಾದಾ ಅವರ ಮುದ್ರೆಯನ್ನು ಹೊಂದಿದೆ ಎಂದು ಹೊಗಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com