Ajit Pawar, Eknath Shinde and Devendra Fadnavi
2024ರಲ್ಲಿ ಸುದ್ದಿಗೋಷ್ಠಿಯಲ್ಲಿ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್

ಅಜಿತ್ ಪವಾರ್ ಪ್ರಮಾಣವಚನ ಹೇಳಿಕೆ; ಶಿಂಧೆ ಹಾಸ್ಯ-ಫಡ್ನವೀಸ್ ನಗು; ಮುದನೀಡುವ ಹಳೆಯ Video viral

ಮಹಾರಾಷ್ಟ್ರ ಮಹಾಯುತಿ ಸರ್ಕಾರದಲ್ಲಿ ರಾಜಕೀಯ ನಾಯಕರ ಮಧ್ಯೆ ಎಂತಹ ಹಾಸ್ಯ ವಿನೋದ ಇತ್ತು. ಅಜಿತ್ ಪವಾರ್ ಅವರಿಗೆ ಎಷ್ಟೊಂದು ಹಾಸ್ಯಪ್ರಜ್ಞೆ ಇತ್ತು, ಇನ್ನು ಇದು ಕಾಣಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
Published on

ವಿಮಾನ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ವಿವಿಧ ಸರ್ಕಾರಗಳ ಅಡಿಯಲ್ಲಿ ಆರು ಬಾರಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಜಿತ್ ಪವಾರ್ ಡಿಸೆಂಬರ್ 5, 2024 ರಂದು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಕೂಟಕ್ಕೆ ದೊರೆತ ಐತಿಹಾಸಿಕ ಬಹುಮತದ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿಯ ಸಮಯದಲ್ಲಿ, ಪತ್ರಕರ್ತರ ಪ್ರಶ್ನಗೆ ಲಘು ಹಾಸ್ಯ ಚಟಾಕಿ ಮೂಲಕ ಶರದ್ ಪವಾರ್ ಉತ್ತರಿಸಿದ್ದು, ಅದಕ್ಕೆ ಏಕನಾಥ್ ಶಿಂಧೆ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರ ಮಹಾಯುತಿ ಸರ್ಕಾರದಲ್ಲಿ ರಾಜಕೀಯ ನಾಯಕರ ಮಧ್ಯೆ ಎಂತಹ ಹಾಸ್ಯ ವಿನೋದ ಇತ್ತು. ಅಜಿತ್ ಪವಾರ್ ಅವರಿಗೆ ಎಷ್ಟೊಂದು ಹಾಸ್ಯಪ್ರಜ್ಞೆ ಇತ್ತು, ಇನ್ನು ಇದು ಕಾಣಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ನೀವು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೀರಾ ಎಂದು ಕೇಳಿದಾಗ ಏಕನಾಥ್ ಶಿಂಧೆ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಆಗ ಅಜಿತ್ ಪವಾರ್ ಮಧ್ಯಪ್ರವೇಶಿಸಿ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ತಮಾಷೆಯಾಗಿ ಹೇಳಿದರು. ನಂತರ ಶಿಂಧೆ ಪ್ರಮಾಣ ವಚನ ಸ್ವೀಕರಿಸುವಲ್ಲಿ ಪವಾರ್ ಅವರ "ಅನುಭವ"ದ ಬಗ್ಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು.

Ajit Pawar, Eknath Shinde and Devendra Fadnavi
ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

ಡಿಸೆಂಬರ್ 5 ರಂದು ದೇವೇಂದ್ರ ಫಡ್ನವೀಸ್ ಅವರ ಉಪನಾಯಕರಾಗಿ ತಾವು ಮತ್ತು ಪವಾರ್ ಪ್ರಮಾಣ ವಚನ ಸ್ವೀಕರಿಸುತ್ತೀರಾ ಎಂದು ಕೇಳಿದಾಗ, ಶಿಂಧೆ ನೇರ ಉತ್ತರ ನೀಡುವುದನ್ನು ತಪ್ಪಿಸಿ, "ಸಂಜೆಯವರೆಗೆ ಕಾಯಿರಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾರೆ.

ಆಗ ಅಜಿತ್ ಪವಾರ್ ಹಾಸ್ಯಕ್ಕೆ ಮತ್ತಷ್ಟು ಮೆರುಗು ನೀಡಿ, "ಶ್ಯಾಂ ತಕ್ ಉಂಕಾ ಸಮಾಜ್ ಆಯೇಗಾ (ಸಂಜೆಯೊಳಗೆ ಶಿಂಧೆ ಬಗ್ಗೆ ನಮಗೆ ತಿಳಿಯುತ್ತದೆ). ನಾನು ಪ್ರಮಾಣ ವಚನ ಸ್ವೀಕರಿಸುತ್ತೇನೆ; ನಾನು ಕಾಯುವುದಿಲ್ಲ" ಎನ್ನುತ್ತಾರೆ. ಅವರ ಹೇಳಿಕೆಯು ಅಲ್ಲಿದ್ದವರಿಂದ ನಗುವನ್ನು ಹುಟ್ಟುಹಾಕಿತು.

ಆಗ ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ ಏಕನಾಥ್ ಶಿಂಧೆ, "ದಾದಾ ಕೋ ಅನುಭವ್ ಹೈ, ಸುಬಹ್ ಭಿ ಲೆನೆ ಕಾ ಔರ್ ಶಾಮ್ ಕೋ ಭಿ ಲೆನೆ ಕಾ" ಎಂದು ಹೇಳಿದರು. (ದಾದಾ ಅವರಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅನುಭವವಿದೆ) ಎನ್ನುತ್ತಾರೆ.

ಇದಕ್ಕೆ ಶರದ್ ಪವಾರ್ ಮರಾಠಿಯಲ್ಲಿ, ಕಳೆದ ಬಾರಿ ತಾವು ಮತ್ತು ಫಡ್ನವೀಸ್ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದಾಗ, ಅವರು ಹೆಚ್ಚು ಕಾಲ ಸರ್ಕಾರ ನಡೆಸಲು ಸಾಧ್ಯವಾಗಲಿಲ್ಲ ಎಂದರು.

ಈ ಹೇಳಿಕೆಯು 2019 ರಲ್ಲಿ ಶರದ್ ಪವಾರ್ ಅವರು ದೇವೇಂದ್ರ ಫಡ್ನವೀಸ್ ಅವರ ಉಪ ಮುಖ್ಯಮಂತ್ರಿಯಾಗಿ ಬೆಳಗಿನ ಜಾವ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸ್ಪಷ್ಟ ಉಲ್ಲೇಖವಾಗಿತ್ತು, ಕೆಲವೇ ದಿನಗಳಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿಕೂಟವು ವಿಸರ್ಜನೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com