ಸುನೇತ್ರಾ ಪ್ರಮಾಣವಚನದ ಬಗ್ಗೆ ಮಾಹಿತಿಯಿಲ್ಲ: NCP ಬಣಗಳನ್ನು ಒಗ್ಗೂಡಿಸುವುದು ಅಜಿತ್ ಆಸೆಯಾಗಿತ್ತು; ಶರದ್ ಪವಾರ್

ಶರದ್ ಪವಾರ್ ಕುಟುಂಬದಿಂದ ಯಾರಾದರೂ ಸಮಾರಂಭದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಮಾಣ ವಚನ ಸ್ವೀಕಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಎನ್‌ಸಿಪಿ ನಿರ್ಧಾರ ತೆಗೆದುಕೊಂಡಿರಬೇಕು ಎಂದಿದ್ದಾರೆ.
Sharad pawar
ಶರದ್ ಪವಾರ್
Updated on

ಮುಂಬಯಿ: ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಈ ಬೆಳವಣಿಗೆಯಿಂದ ದೂರ ಉಳಿದಿದ್ದು, ಅದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಬಾರಾಮತಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪವಾರ್, ಮಾಧ್ಯಮ ವರದಿಗಳ ಮೂಲಕ ಪ್ರಮಾಣ ವಚನ ಸ್ವೀಕಾರದ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ಪ್ರಮಾಣವಚನ ಸ್ವೀಕಾರದ ಬಗ್ಗೆ ನಮಗೆ ತಿಳಿದಿಲ್ಲ. ಸುದ್ದಿಗಳ ಮೂಲಕ ನಮಗೆ ಅದರ ಬಗ್ಗೆ ತಿಳಿದುಕೊಂಡೆ ಎಂದಿದ್ದಾರೆ.

ಶರದ್ ಪವಾರ್ ಕುಟುಂಬದಿಂದ ಯಾರಾದರೂ ಸಮಾರಂಭದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಮಾಣ ವಚನ ಸ್ವೀಕಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಎನ್‌ಸಿಪಿ ನಿರ್ಧಾರ ತೆಗೆದುಕೊಂಡಿರಬೇಕು ಎಂದಿದ್ದಾರೆ.

ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರಂತಹ ಕೆಲವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಅವರು ಹೇಳಿದರು. ಎರಡೂ ಬಣಗಳನ್ನು ಒಂದುಗೂಡಿಸುವುದು ಅಜಿತ್ ಪವಾರ್ ಅವರ ಬಯಕೆಯಾಗಿತ್ತು ಎಂದು ಶರದ್ ಪವಾರ್ ತಿಳಿಸಿದ್ದಾರೆ.

Sharad pawar
ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: DCM ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕಾರ?

ಈಗ ಅವರ ಆಸೆ ಈಡೇರಬೇಕೆಂದು ನಾವು ಭಾವಿಸುತ್ತೇವೆ. ಅಜಿತ್ ಪವಾರ್, ಶಶಿಕಾಂತ್ ಶಿಂಧೆ ಮತ್ತು ಜಯಂತ್ ಪಾಟೀಲ್ ಅವರು ಎರಡೂ ಬಣಗಳ ವಿಲೀನದ ಬಗ್ಗೆ ಮಾತುಕತೆ ಆರಂಭಿಸಿದ್ದರು. ವಿಲೀನ ದಿನಾಂಕವನ್ನು ಸಹ ನಿಗದಿಪಡಿಸಲಾಗಿತ್ತು. ಫೆಬ್ರವರಿ 12 ರಂದು (ಫೆಬ್ರವರಿ) ನಿಗದಿಪಡಿಸಲಾಗಿತ್ತು. ದುರದೃಷ್ಟವಶಾತ್, ಅಜಿತ್ ಅದಕ್ಕೂ ಮೊದಲೇ ನಮ್ಮನ್ನು ತೊರೆದರು" ಎಂದು ಅವರು ಹೇಳಿದರು.

ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಶನಿವಾರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಎನ್‌ಸಿಪಿ ಮೂಲಗಳು ರ ತಿಳಿಸಿವೆ.

ಜನವರಿ 28 ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾದ ನಂತರ, ದೇವೇಂದ್ರ ಫಡ್ನವೀಸ್ ನೇತೃತ್ವದ ಸಂಪುಟದಲ್ಲಿ ಅವರ ದಿವಂಗತ ಪತಿ ಹೊಂದಿದ್ದ ಹುದ್ದೆಯನ್ನು ಅವರಿಗೆ ನೀಡಬೇಕೆಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕರ ಒಂದು ಭಾಗ ಒತ್ತಾಯಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com