Puri Rath Yatra: ಭಾರಿ ಜನಸಾಗರ; ಕಾಲ್ತುಳಿತ ಓರ್ವ ಸಾವು, ನೂರಾರು ಮಂದಿಗೆ ಗಾಯ!

60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಜನಸಾಗರದ ನಡುವೆ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
An injured devotee being carried on a stretcher
ರಥಯಾತ್ರೆ ವೇಳೆ ಗಾಯಗೊಂಡ ವ್ಯಕ್ತಿಯ ರಕ್ಷಣಾ ಕಾರ್ಯಾಚರಣೆ ಚಿತ್ರ
Updated on

ಪುರಿ ರಥಯಾತ್ರೆ: ಇತಿಹಾಸ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ದುರ್ಘಟನೆ ಸಂಭವಿಸಿದೆ. ಜನಸಾಗರಿಂದ ಕಾಲ್ತುಳಿತ ಉಂಟಾಗಿದ್ದು, ಒಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಲಕ್ಷಾಂತರ ಜನರ ನಡುವೆ ಇಂದು ಸಂಜೆ ಆರಂಭವಾದ ರಥಯಾತ್ರೆ ವೇಳೆಯಲ್ಲಿ ಜನಸಂದಣಿಯಲ್ಲಿ ಸಿಲುಕಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದು, ಈ ಪೈಕಿ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಜನಸಾಗರದ ನಡುವೆ ಸಿಲುಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಪ್ರತ್ಯೇಕ ಹಾಗೂ ಸಂಬಂಧವಿಲ್ಲದ ಮತ್ತೊಂದು ಘಟನೆಯಲ್ಲಿ 35 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯೊಬ್ಬರು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಜನಸಂದಣಿಯಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಏಳು ಮಂದಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಸದ್ಯ ಪರಿಸ್ಥಿತಿ ಸಹಜವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

An injured devotee being carried on a stretcher
Watch | ಪುರಿ ಜಗನ್ನಾಥ ರಥಯಾತ್ರೆಗೆ ಗ್ರ್ಯಾಂಡ್ ರಸ್ತೆ ಅಲಂಕಾರ!

ಇಂದಿನಿಂದ ಜುಲೈ 24ರವರೆಗೆ ನಡೆಯಲಿರುವ ರಥಯಾತ್ರೆಗೆ ಅತ್ಯಂತ ಪವಿತ್ರ ಹಾಗೂ ವಿಶಿಷ್ಟವಾದ ಮಹತ್ವವಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದ ಈ ಯಾತ್ರೆ ಚಾಲನೆ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಜಗನ್ನಾಥ ಸ್ವಾಮಿ ತನ್ನ ಹಿರಿಯ ಸಹೋದರ ಬಲಭದ್ರ ಹಾಗೂ ತಂಗಿ ಸುಭದ್ರೆಯ ಜೊತೆಗೂಡಿ ನಗರ ಸಂಚಾರಕ್ಕೆ ಹೊರಡುತ್ತಾನೆ. ಮೂರು ದೇವತೆಗಳು ಗುಂಡಿಚಾ ಮಂದಿರಕ್ಕೆ ಪ್ರಯಾಣ ಬೆಳೆಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com