NEET-UG results: ಪಂಜಾಬ್‌ನ ಆರ್ಯನ್ ಗುಪ್ತಾ, ಹರಿಯಾಣದ ಪ್ರಾಂಶುಲ್ ಬನ್ಸಾಲ್ ಟಾಪರ್,11.21 ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಅರ್ಹ

ಟಾಪರ್‌ಗಳ ಪಟ್ಟಿಯಲ್ಲಿ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪಂಶುಲ್ ಬನ್ಸಾಲ್ ತಲಾ 715 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ರದ್ದುಗೊಂಡು ಮರು ನಡೆಸಲಾಗಿದ್ದ ನೀಟ್-ಯುಜಿ (NEET-UG) ಪರೀಕ್ಷೆಯ ಫಲಿತಾಂಶ ನಿನ್ನೆ ಗುರುವಾರ ರಾತ್ರಿ ಪ್ರಕಟವಾಗಿದೆ.

ಪರೀಕ್ಷೆಗೆ ಹಾಜರಾದ ಸುಮಾರು 20 ಲಕ್ಷ ವಿದ್ಯಾರ್ಥಿಗಳಲ್ಲಿ 11.21 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ಟಾಪರ್‌ಗಳ ಪಟ್ಟಿಯಲ್ಲಿ ಪಂಜಾಬ್‌ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪಂಶುಲ್ ಬನ್ಸಾಲ್ ತಲಾ 715 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಉಪಲಕ್ಷ್ಯ ಗೋಯಲ್, ಬಿಹಾರದ ಆಯುಷ್ ಭಾಲೋಟಿಯಾ ಹಾಗೂ ಮಹಾರಾಷ್ಟ್ರದ ಕುಡಲೆ ಶ್ರಾವಣಿ ಕೃಷ್ಣ ಕ್ರಮವಾಗಿ ದೇಶದ ಮೂರನೇ, ನಾಲ್ಕನೇ ಮತ್ತು ಐದನೇ ರ್ಯಾಂಕ್ ಪಡೆದಿದ್ದಾರೆ.

Representational image
NEET ಪರೀಕ್ಷೆ ರದ್ದು: ಕಲಬುರಗಿಯಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ

ದೆಹಲಿ ರಾಜ್ಯದ ಅಭ್ಯರ್ಥಿಗಳಲ್ಲಿ ಕಾಶಿ ಧಾಲ್ (ಅಖಿಲ ಭಾರತ ರ್ಯಾಂಕ್ 24) ಅತಿ ಹೆಚ್ಚು ಅಂಕ ಗಳಿಸಿದರೆ, ಕರ್ನಾಟಕದ ವೈಷ್ಣವಿ ದಾಸ್ (ಅಖಿಲ ಭಾರತ ರ್ಯಾಂಕ್ 20) ರಾಜ್ಯದ ಟಾಪರ್ ಆಗಿದ್ದಾರೆ.

ಒಟ್ಟು 19 ಅಭ್ಯರ್ಥಿಗಳು 720ರಲ್ಲಿ 700 ಅಂಕಗಳನ್ನು ಗಳಿಸಿದ್ದು, 138 ಅಭ್ಯರ್ಥಿಗಳು 690ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಇದಲ್ಲದೆ, 1,492 ವಿದ್ಯಾರ್ಥಿಗಳು 650ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಭಾರತದ 551 ನಗರಗಳ 5,440 ಪರೀಕ್ಷಾ ಕೇಂದ್ರಗಳು ಹಾಗೂ ವಿದೇಶದ 14 ನಗರಗಳಲ್ಲಿ ನಡೆದ ಈ ಪ್ರವೇಶ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪದವಿ ಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ (AYUSH) ಹಾಗೂ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು 13 ಭಾಷೆಗಳಲ್ಲಿ ಪರೀಕ್ಷೆ ಬರೆದಿದ್ದು, ಅರ್ಹತೆ ಪಡೆದವರಲ್ಲಿ 58 ಶೇಕಡಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳ ಬಹುಪಾಲು 17ರಿಂದ 19 ವರ್ಷ ವಯೋಮಾನದವರಾಗಿದ್ದಾರೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೇ ವೇಳೆ ಕಾಕ್ರೋಚ್ ಜನತಾ ಪಾರ್ಟಿಯ ಯುವ ನಾಯಕರು ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಿದ್ದರು.

Representational image
UGCET: ಮೊದಲ ಸುತ್ತಿನ ಸೀಟು ಹಂಚಿಕೆ, ಆಯ್ಕೆ ಪ್ರಕ್ರಿಯೆ ಪ್ರಕಟ; ನೀಟ್ ಫಲಿತಾಂಶದ ಬಳಿಕ ವೈದ್ಯಕೀಯ ಕೋರ್ಸ್‌ ಕೌನ್ಸೆಲಿಂಗ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com