

ಮುಂಬೈ: ಶಿವಸೇನಾ(ಯುಬಿಟಿ)ಯಲ್ಲಿನ ಬಂಡಾಯ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರು ಯುಬಿಟಿ ಸೇನಾ ಸಂಸದರು ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಸೇರಲಿದ್ದಾರೆ ಎಂದು ಶಿವಸೇನಾ ಶಾಸಕ ಮತ್ತು ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್ ಸೋಮವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸರ್ನಾಯಕ್, "ಇಂದು ಮಧ್ಯಾಹ್ನ 3 ಗಂಟೆಗೆ, ಆರು ಸಂಸದರು ಅಧಿಕೃತವಾಗಿ ಶಿವಸೇನೆಗೆ ಸೇರಲಿದ್ದಾರೆ. ಇದು ಸಂಸತ್ತಿನಲ್ಲಿ ನಮ್ಮ ಸಂಸದರ ಸಂಖ್ಯೆಯನ್ನು 7 ರಿಂದ 13 ಕ್ಕೆ ಹೆಚ್ಚಿಸುತ್ತದೆ. ಇದು ಶಿವಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ.
ಯುಬಿಟಿ ಸೇನಾ ಬಂಡಾಯ ಸಂಸದರು ಈಗಾಗಲೇ ಲೋಕಸಭಾ ಸ್ಪೀಕರ್‌ಗೆ ಪತ್ರ ನೀಡಿದ್ದಾರೆ ಎಂದು ಅವರು ತಿಳಿಸಿದರು.
"ಆಪರೇಷನ್ ಟೈಗರ್ 365 ದಿನಗಳೂ ಮುಂದುವರಿಯುತ್ತದೆ; ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುವ ಆರು ಸಂಸದರು ಇಂದು ಮಧ್ಯಾಹ್ನ 3 ಗಂಟೆಗೆ ಶಿವಸೇನೆಗೆ ಸೇರುತ್ತಿದ್ದಾರೆ. ಅವರು ಲೋಕಸಭಾ ಸ್ಪೀಕರ್‌ಗೆ ಪತ್ರ ನೀಡಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಸಂಜಯ್ ರಾವತ್‌ಗೆ ನಾವು ಧನ್ಯವಾದ ಹೇಳುತ್ತೇವೆ. ಏಕೆಂದರೆ, ಮೊದಲು, ಶಾಸಕರು, ಈಗ ಆರು ಸಂಸದರು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ" ಎಂದರು.
ಏತನ್ಮಧ್ಯೆ, ಶಿವಸೇನೆ(ಯುಬಿಟಿ) ಶಾಸಕ ಮಹೇಶ್ ಸಾವಂತ್, "ಜಾನೆ ವಾಲೆ ಗಯೇ! (ಸಾಮ್ನಾದಲ್ಲಿ ಪ್ರಕಟವಾದದ್ದನ್ನು) ನಾವು ಒಪ್ಪುತ್ತೇವೆ" ಎಂದು ಹೇಳಿದರು.
ಈ ಮಧ್ಯೆ ಆರು ಭಿನ್ನಮತೀಯರಲ್ಲಿ ಒಬ್ಬರಾದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವುದಾಗಿ ಭಾನುವಾರ ಹೇಳಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಸೋಲು ಮತ್ತು ವಿರೋಧ ಪಕ್ಷದಲ್ಲಿರುವುದರಿಂದ ಜನರಿಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದರು.
Advertisement