‘ಪ್ರಧಾನಿ ಮೋದಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ’: ರಾಹುಲ್ ಗಾಂಧಿ ಆರೋಪ; ಬಿಜೆಪಿ ತಿರುಗೇಟು
ಇಂದು ಬುಧವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆಗೆ ಬಿಜೆಪಿ ಸದಸ್ಯರು ಭಾರೀ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ನಾಟಕೀಯ ದೃಶ್ಯಗಳು ಕಂಡುಬಂದವು. ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರಧಾನಮಂತ್ರಿಯನ್ನು ಸಮರ್ಥಿಸಿಕೊಂಡು, ಅವರು ಯಾರ ಜೊತೆ ಕೂಡ ರಾಜಿ ಮಾಡಿಕೊಂಡಿಲ್ಲ, ಮಾಡಲು ಸಾಧ್ಯ ಕೂಡ ಎಂದರು.
ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೊಂದಾಣಿಕೆ ಬಗ್ಗೆ ಮೂಲಭೂತ ಪ್ರಶ್ನೆಯನ್ನು ಎತ್ತಲು ಬಯಸುತ್ತೇನೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಹಾಗೂ ಜೆಫ್ರಿ ಎಪ್ಸ್ಟೈನ್ ಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿದಾಗ ಚರ್ಚೆಯನ್ನು ಮುಂದುವರಿಸಲು ನನ್ನನ್ನು ಕಳೆದ ಬಾರಿ ತಡೆದರು ಎಂದು ಆರೋಪಿಸಿದರು.
ಇದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದ ಮೊದಲ ಘಟನೆ ಎಂದು ಕೂಡ ಅವರು ಆರೋಪಿಸಿದರು. ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಆರೋಪವನ್ನು ತಳ್ಳಿಹಾಕಿ ಪ್ರಧಾನಮಂತ್ರಿಯನ್ನು ಸಮರ್ಥಿಸಿದರು.
ಪ್ರಧಾನ ಮಂತ್ರಿಗಳು ಯಾವುದೇ ರೀತಿಯಲ್ಲಿ ರಾಜಿಮಾಡಿಕೊಂಡಿಲ್ಲ ಎಂದರು. ಆಗ ರಾಹುಲ್ ಗಾಂಧಿ, ತಮ್ಮನ್ನು ಹಲವಾರು ಬಾರಿ ಮಾತನಾಡುವುದರಿಂದ ತಡೆಯಲಾಗಿದೆ ಎಂದು ಹೇಳಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕಾರ್ಯಪದ್ಧತಿ ಹಾಗೂ ಸಭಾಧ್ಯಕ್ಷರ ಪಾತ್ರದ ಕುರಿತು ಪ್ರಶ್ನೆ ಎತ್ತಿದರು.
ಲೋಕಸಭೆ ಭಾರತ ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ, ಒಂದೇ ರಾಜಕೀಯ ಪಕ್ಷವನ್ನು ಮಾತ್ರವಲ್ಲ, ವಿರೋಧ ಪಕ್ಷದ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತಿಲ್ಲ ಎಂಬುದನ್ನೂ ಅವರು ಆರೋಪಿಸಿದರು.
ಇಲ್ಲಿ ನಡೆಯುತ್ತಿರುವ ಚರ್ಚೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಸಭಾಧ್ಯಕ್ಷರ ಪಾತ್ರದ ಬಗ್ಗೆ ಅನೇಕ ಬಾರಿ ನನ್ನ ಹೆಸರನ್ನು ಎತ್ತಿ ನನ್ನ ಬಗ್ಗೆ ಅನೇಕ ಆರೋಪಗಳನ್ನು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ಸದನವು ಭಾರತದ ಜನರ ಅಭಿವ್ಯಕ್ತಿ. ಇದು ಒಂದೇ ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಇಡೀ ದೇಶವನ್ನು ಪ್ರತಿನಿಧಿಸುತ್ತದೆ. ನಾವು ಮಾತನಾಡಲು ಎದ್ದಾಗಲೆಲ್ಲ ನಮ್ಮನ್ನು ತಡೆಯಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

