

ನವದೆಹಲಿ: ಬಳಕೆಯಾಗದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಟೆಲಿಕಾಂ ಕಂಪನಿಗಳು ಅನುಮತಿ ನೀಡಬೇಕು, ಆ ರೀತಿಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸಂಸತ್ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ತಮ್ಮ ವಾದವನ್ನು ಮಂಡಿಸಿದ್ದಾರೆ.
ಸಾಮಾನ್ಯವಾಗಿ ನಾವು ಇಂಟರ್ನೆಟ್ ಡೇಟಾ ಹಾಕಿಸುವ ಸಂದರ್ಭದಲ್ಲಿ 1.5GB, 2GB, 3GB ಎಂಬಂತೆ ರಿಚಾರ್ಜ್ ಮಾಡಿಕೊಳ್ಳುತ್ತೇವೆ. ಟೆಲಿಕಾಂ ಕಂಪನಿಗಳು ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿರುತ್ತವೆ. 24 ಗಂಟೆ ಮುಗಿದ ಬಳಿಕ ಹೊಸ ಇಂಟರ್ನೆಟ್ ಡೇಟಾ ಆರಂಭವಾಗುತ್ತದೆ. ಆದರೆ ನಾವು ಕೆಲವೊಮ್ಮೆ ಒಂದು ದಿನದಲ್ಲಿ ಕಂಪ್ಲೀಟ್ ಡೇಟಾ ವನ್ನು ಬಳಸುವುದಿಲ್ಲ.
ಇದೆ ಬಳಸದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಕಂಪನಿಗಳು ಹಿಂಪಡೆಯುತ್ತವೆ. ಆದರೆ ನಾವು ಅದಕ್ಕೆ ಸಂಪೂರ್ಣವಾಗಿ ಹಣವನ್ನು ಪಾವತಿಸಿರುತ್ತೇವೆ. ಹೀಗಾಗಿ ಬಳಕೆಯಾಗದೆ ಉಳಿದ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಅನುಮತಿ ನೀಡಬೇಕೆಂದು ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧ್ವನಿಯೆತ್ತಿದ್ದಾರೆ.
ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಅದನ್ನು ಮಾರನೇ ದಿನ ಬಳಸಲಾಗಲ್ಲ. ಬಳಕೆಯಾಗದ ಡೇಟಾವು ಸಂಪೂರ್ಣವಾಗಿ ಪಾವತಿಸಲ್ಪಟ್ಟಿದ್ದರೂ ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತದೆ.
ಬಳಕೆದಾರರ ಬಳಕೆಯಾಗದ ಮೊಬೈಲ್ ಡೇಟಾವನ್ನು ಟೆಲಿಕಾಂ ಕಂಪನಿಗಳು ಮಧ್ಯರಾತ್ರಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಇದನ್ನು ಮರುದಿನಕ್ಕೆ ಮುಂದುವರಿಸಲಾಗುವುದಿಲ್ಲ. ಇದು ಅನೈತಿಕ ಎಂದು ಚಡ್ಡಾ ಕಿಡಿಕಾರಿದ್ದಾರೆ.
ಅಲ್ಲದೆ ಮೊಬೈಲ್ ಡೇಟಾವನ್ನು ರೋಲ್‌ಓವರ್ ಮಾಡಲು ಅಥವಾ ಮಾರನೇ ದಿನಕ್ಕೆ ಸಾಗಿಸಲು ಯಾವುದೇ ಸೌಲಭ್ಯವಿಲ್ಲ. ನಾವು ಪಾವತಿಸಿದ ಡೇಟಾವನ್ನು ಟೆಲಿಕಾಂ ಕಂಪನಿಗಳು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬೇಕು?. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್‌ನಂತಹ ಇತರ ಗ್ರಾಹಕ ಸೇವೆಗಳೊಂದಿಗೆ ಸಮಾನಾಂತರವಾಗಿ ಡೇಟಾವನ್ನು ನೋಡಬೇಕು.
ಬಳಕೆಯಾಗದ ಡೇಟಾವನ್ನು ರೋಲ್‌ಓವರ್ ಮಾಡಲು ಇಲ್ಲ, ಕುಟುಂಬ ಮತ್ತು ಸ್ನೇಹಿತರ ನಡುವೆ ಅದನ್ನು ವರ್ಗಾವಣೆ ಮಾಡುವ ಪ್ರೀತಿಯಲ್ಲಿ ಯಾವುದಾದರು ಕ್ರಮ ತರಬೇಕು ಎಂದು ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.
Advertisement